ಮಹಾರಾಷ್ಟ್ರ: ಮೂವರು ಸಚಿವರಿಗೆ ಕೊರೋನ ದೃಢ

0
353

ಸನ್ಮಾರ್ಗ ವಾರ್ತೆ

ಮುಂಬೈ, ಜೂ. 12: ಮಹಾರಾಷ್ಟ್ರದಲ್ಲಿ ಸಚಿವರಲ್ಲಿ ಮೂರನೆ ವ್ಯಕ್ತಿ ಕೊರೋನ ಪೀಡಿತರಾಗಿದ್ದು, ಎನ್‍ಸಿಪಿ ನಾಯಕ ಹಾಗೂ ಸಚಿವರಿಗೆ ಕೊರೋನ ದೃಢಪಟ್ಟಿದೆ. ಕ್ಯಾಬಿನೆಟ್ ಸಚಿವರು ಮತ್ತು ಆರು ಸ್ಟಾಫ್‍ಗಳಿಗೂ ಗುರುವಾರ ರಾತ್ರೆಯಲ್ಲಿ ಹೊರ ಬಂದ ಪರೀಕ್ಷಾ ಫಲಿತಾಂಶದಲ್ಲಿ ಕೊರೋನ ಇರುವುದು ದೃಢಪಟ್ಟಿದೆ. ಇಬ್ಬರು ಚಾಲಕರು, ಅಡಿಗೆಯಾಳಿಗೂ ಕೊರೋನಾ ದೃಢಪಟ್ಟಿದೆ.

ಈ ಹಿಂದೆ ಮಹಾರಾಷ್ಟ್ರ ಮಾಜಿ ಸಚಿವ ಮತ್ತು ಮುಖ್ಯಮಂತ್ರಿ ಅಶೋಕ್ ಚವಾನ್, ವಸತಿ ಸಚಿವ ಜಿತೇಂದ್ರ ಅವಧ್‍ರಿಗೆ ಕೊರೋನ ಸೋಂಕು ತಗಲಿತ್ತು. ಅಶೋಕ್ ಚವಾನ್‍ರ ಮನೆಯ ಕೆಲಸದಾಳುವಿಗೆ ಕೊರೋನ ಪಾಸಿಟಿವ್ ಆದ ನಂತರ ಅವರನ್ನು ಪರೀಕ್ಷೆ ಗುರಿಪಡಿಸಲಾಗಿತ್ತು. ಇದೇ ವೇಳೆ ಅವಧ್‌ರವರು ರೋಗದಿಂದ ಗುಣಮುಖರಾಗಿ ಮನೆಗೆ ತೆರೆಳಿದ್ದಾರೆ.

ಮಹಾರಾಷ್ಟ್ರದಲ್ಲಿ ಹೊಸದಾಗಿ 3, 607 ಜನರಲ್ಲಿ ಕೊರೋನ ಸೋಂಕು ಕಂಡು ಬಂದಿದೆ. 24 ಗಂಟೆಗಳಲ್ಲಿ 152 ಮಂದಿ ಮೃತಪಟ್ಟಿದ್ದಾರೆ. ಆರೋಗ್ಯ ವಿಭಾಗದ ದತ್ತಾಂಶಗಳ ಪ್ರಕಾರ ಮಹಾರಾಷ್ಟ್ರದಲ್ಲಿ 97,648 ಜನರಿಗೆ ಕೊರೋನ ಕೊರೋನ ಸೋಂಕು ದೃಢಪಟ್ಟಿದ್ದು, ಇವರಲ್ಲಿ 46,078 ಮಂದಿ ಗುಣಮುಖಗೊಂಡಿದ್ದಾರೆ ಹಾಗೂ 3,590 ಮಂದಿ ಕೊರೋನಕ್ಕೆ ಬಲಿಯಾಗಿದ್ದಾರೆ.

 

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.