ಸನ್ಮಾರ್ಗ ವಾರ್ತೆ
ಟೆಹ್ರಾನ್,ಜೂ.12: ಇಸ್ಲಾಮಿಕ್ ರೆವಲ್ಯೂಶನರಿ ಗಾರ್ಡ್ ಕಮಾಂಡರ್ ಜನರಲ್ ಖಾಸಿಂ ಸುಲೈಮಾನಿ ಹತ್ಯೆಗೆ ಅಮೆರಿಕ ಮತ್ತು ಇಸ್ರೇಲಿಗೆ ಮಾಹಿತಿ ಕೊಟ್ಟ ವ್ಯಕ್ತಿಯನ್ನು ವಧಿಸಲಾಗುವುದು ಎಂದು ಇರಾನ್ ತಿಳಿಸಿದೆ. ಜನವರಿಯಲ್ಲಿ ಮಾನವರಹಿತ ವಿಮಾನದಾಳಿಯಲ್ಲಿ ಸುಲೈಮಾನಿ ಹತ್ಯೆಯಾಗಿದ್ದರು.
ಮರಣದಂಡನೆಗೆ ಗುರಿಯಾದ ವ್ಯಕ್ತಿಯ ಹೆಸರು ಮಹ್ಮೂದ್ ಮೂಸವಿ ಮಾಜಿದ್ ಎಂದು ತಿಳಿಸಲಾಗಿದ್ದು, ಇದಲ್ಲದೆ ಬೇರೆ ಯಾವ ವಿವರಗಳನ್ನೂ ಇರಾನ್ ಬಹಿರಂಗಪಡಿಸಿಲ್ಲ. ಈತನಿಗೆ ಸಿಐಎಯು ಮತ್ತು ಮೊಸಾದ್ನೊಂದಿಗೆ ಸಂಬಂಧ ಇತ್ತು ಎಂದು ಇರಾನ್ ನ್ಯಾಯಾಂಗ ವಕ್ತಾರ ಗುಲಾಂ ಹುಸೈನ್ ಇಸ್ಮಾಯಿಲಿ ತಿಳಿಸಿದರು.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












