ಗೇರುಬೀಜ ಫ್ಯಾಕ್ಟರಿಗೆ ನಷ್ಟ: ಆತ್ಮಹತ್ಯೆ ಮಾಡಿಕೊಂಡ ಫ್ಯಾಕ್ಟರಿ ಮಾಲಕ

0
1170

ಸನ್ಮಾರ್ಗ ವಾರ್ತೆ

ಕೇರಳ,ಜೂ.12: ಕೊಲ್ಲಂನ ಗೇರು ಬೀಜ ಫ್ಯಾಕ್ಟರಿಯ ಮಾಲಕರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿರ್ಮಲ ಮಾತಾ ಗೇರುಬೀಜ ಕಾರ್ಖಾನೆಯ ಮಾಲಕ ಸೈಮನ್ ಮತ್ತಾಯಿ ಎಂಬವರು ತನ್ನ ಉದ್ಯಮ ನಷ್ಟದಲ್ಲಿರುವುದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡರು. ಅವರಿಗೆ ಜಪ್ತಿಯ ಹೆದರಿಕೆಯಿತ್ತು. ನಂತರ ಅವರು ತೀರ ಮಾನಸಿಕವಾಗಿ ಕುಗ್ಗಿ ಹೋಗಿದ್ದರು ಎಂದು ಸಂಬಂಧಿಕರು ಹೇಳಿದ್ದಾರೆ. ಮನೆಯೂ ಹೋಗುತ್ತದೆ ಎಂದು ಮಗ ಹೆದರಿಕೊಂಡಿದ್ದ ಎಂದು ಸೈಮನ್‍ರ ತಾಯಿ ಹೇಳಿದ್ದಾರೆ.

ಬುಧವಾರ ಸಂಜೆ ಮನೆಯ ಸಮೀಪದ ಫ್ಯಾಕ್ಟರಿಯ ಪಾರ್ಕಿಂಗ್ ಸೆಂಟರ್‌ನಲ್ಲಿ ಇವರ ಮೃತದೇಹ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ನಂತರ ತಿರುವನಂತಪುರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾದರೂ ಜೀವ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಹಣಕಾಸು ಮುಗ್ಗಟ್ಟಿನಿಂದ 2015ರಲ್ಲಿಯೇ ಸೈಮನ್ ಕಾರ್ಖಾನೆ ಮುಚ್ಚಿದ್ದರು. ಅವರಿಗೆ ನಾಲ್ಕು ಕೋಟಿ ರೂಪಾಯಿ ಸಾಲ ಇದೆ ಎಂದು ಸಂಬಂಧಿಕರು ಹೇಳಿದ್ದಾರೆ.

ಹಲವು ಬಾರಿ ಬ್ಯಾಂಕಿನಿಂದ ಜಪ್ತಿ ನೋಟಿಸು ಬಂದಿತ್ತು. ಜಪ್ತಿಯಿಂದ ಪಾರಾಗಲೂ ಹಲವು ಸಲ ಸೈಮನ್ ಬ್ಯಾಂಕ್‍ನ ಮುಂದೆ ಅವಲತ್ತುಕೊಂಡಿದ್ದರೂ ಪ್ರಯೋಜನವಾಗಿರಲಿಲ್ಲ.
ಇವರನ್ನು ನಿಷ್ಕ್ರಿಯ ಆಸ್ತಿಯ ಸಾಲಿಗೆ ಸೇರಿಸಿದ್ದರಿಂದ ಬೇರೆ ಬ್ಯಾಂಕುಗಳನ್ನು ಸಂಪರ್ಕಿಸಲಿಕ್ಕೋ, ಸಾಲ ಪಡೆಯುವುದಕ್ಕೋ ಸೈಮನ್‍ರಿಂದ ಸಾಧ್ಯವಾಗಿರಲಿಲ್ಲ. ಆತ್ಮಹತ್ಯೆಯಲ್ಲದೆ ಪರಿಹಾರ ಇಲ್ಲ ಎಂಬ ಸ್ಥಿತಿ ಬಂದಿದೆ ಎಂದು ಅವರು ಹೇಳಿಕೊಳ್ಳುತ್ತಿದ್ದರು. ಲಾಕ್‍ಡೌನ್ ಬಂದ ಮೇಲೆ ಅವರು ತುಂಬ ಖಿನ್ನತೆಗೊಳಗಾಗಿದ್ದರು ಎಂದು ಮತ್ತಾಯಿ ಹೇಳಿದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.