ಪೊಲೀಸರಿಂದ ಗುಂಡು ಹಾರಿಸಲ್ಪಟ್ಟು ಸೋಂಟದ ಕೆಳಭಾಗ ನಿಷ್ಕ್ರಿಯಗೊಂಡ ಯುವಕನಿಗೆ 6 ಮಿಲಿಯನ್ ಡಾಲರ್ ನಷ್ಟ ಪರಿಹಾರ

0
726

ಸನ್ಮಾರ್ಗ ವಾರ್ತೆ

ಪ್ಲೊರಿಡಾ,ಜೂ.13: ದುಷ್ಕರ್ಮಿಯೆಂದು ತಪ್ಪಾಗಿ ತಿಳಿದು ಪೊಲೀಸರು ಗುಂಡು ಹಾರಿಸಿದ ಪರಿಣಾಮ ಸೊಂಟದ ಕೆಳಭಾಗ ನಿಷ್ಕ್ರಿಯಗೊಂಡ ಡೊಂಟ್ರಲ್ ಸ್ಟೀಫನ್ ಎಂಬ ಯುವಕನಿಗೆ ಆರು ಮಿಲಿಯನ್ ಡಾಲರ್ ನಷ್ಟ ಪರಿಹಾರ ನೀಡಲು ಫ್ಲೊರಿಡದ ಗವರ್ನರ್ ಆದೇಶಿಸಿದ್ದಾರೆ.

ಸ್ಟೀಫನ್ ಕೈಯಲ್ಲಿ ಮೊಬೈಲ್ ಫೋನ್ ಇತ್ತು. ಇದನ್ನು ಬಂದೂಕು ಎಂದು ಭಾವಿಸಿ ಅಮೇರಿಕನ್ ಪೊಲೀಸ್ ಅಧಿಕಾರಿ ನಾಲ್ಕು ಬಾರಿ ಗುಂಡು ಹಾರಿಸಿದ್ದರು. ಇದರಿಂದ ಸ್ಟೀಫನ್ ಮಾರಕವಾಗಿ ಗಾಯಗೊಂಡಿದ್ದು ಆತನ ಸೊಂಟದ ಕೆಳಭಾಗ ನಿಷ್ಕ್ರೀಯವಾಗಿದೆ. ಫ್ಲಾರಿಡಾ ಗವರ್ನರ್ ಆರು ಮಿಲಿಯನ್ ಡಾಲರ್ ನಷ್ಟಪರಿಹಾರದ ಚೆಕ್‍ಗೆ ಸಹಿ ಹಾಕಿದ್ದಾರೆ. ಫ್ಲಾರಿಡದಲ್ಲಿ ರಾನ್ ಡಿಸ್‍ಯೆಂಟಸ್ ಗವರ್ನರ್ ಆಗಿದ್ದಾರೆ.

2013ರಲ್ಲಿ ನಡೆದ ಗುಂಡು ಹಾರಾಟದಲ್ಲಿ ನಡೆದ ಘಟನೆ ಇದು. ಈ ಪ್ರಕರಣದಲ್ಲಿ ಗರಿಷ್ಠ ನಷ್ಟಪರಿಹಾರ ಎರಡು ಲಕ್ಷ ಡಾಲರ್ ಕೊಟ್ಟರೆ ಸಾಲುತ್ತಿತ್ತು ಎಂದು ಕಾನೂನು ಹೇಳುತ್ತಿದೆ. ಈ ಕಾನೂನಿಗೆ ತಿದ್ದುಪಡಿ ಮಾಡಿ ಹೊಸ ಕಾನೂನು ರಚನೆಗೆ ಫ್ಲಾರಿಡದ ವಿಧಾನಸಭೆ ಒಪ್ಪಿಗೆ ನೀಡಿದೆ. 22 ಮಿಲಿಯನ್ ಡಾಲರ್ ನಷ್ಟಪರಿಹಾರ ನೀಡಲು ಘಟನೆಯಲ್ಲಿ ಭಾಗಿಯಾದ ಡೆಪ್ಯುಟಿಗೆ 2016ರಲ್ಲಿ ಫೆಡರಲ್ ಜ್ಯೂರಿ ಹೇಳಿದ್ದರು.

ಮೊದಲು ಅದಕ್ಕೆ ಒಪ್ಪದಿದ್ದರು ನಂತರ ಚರ್ಚೆಯಲ್ಲಿ ಫಾಮ ಬೀಚ್ ಶೆರಿಫ್ 4.5 ಮಿಲಿಯನ್ ಡಾಲರ್ ನೀಡುವುದಕ್ಕೆ ಒಪ್ಪಿಕೊಂಡಿದ್ದರು. ನಷ್ಟಪರಿಹಾರವಾಗಿ ಸಿಗುವ ಆರು ಮಿಲಿಯನ್‍ ಡಾಲರ್‌ನಲ್ಲಿ 3.4 ಮಿಲಿಯನ್ ಸ್ಟೀಫನ್‌ಗೆ ಜೀವನ ವೆಚ್ಚವಾಗಿ ಲಭಿದಲಿದ್ದು, ಉಳಿದ ಮೊತ್ತದಲ್ಲಿ ಅಟಾರ್ನಿ ಶುಲ್ಕ1.1 ಮಿಲಿಯನ್ ಹಾಗೂ 2.5 ಮಿಲಿಯನ್ ಡಾಲರ್ ವ್ಯಯಿಸಲಾಗುವುದು. ರಸ್ಸಿದ್ದ ರಸ್ತೆಯಲ್ಲಿ ಸ್ಟೀಫನ್ ಡೆಪ್ಯುಟಿ ಆಡಮ್ಸ್ ಲಿನ್‍ನ ಪೆಟ್ರೋಲ್ ಕಾರಿನ ಹತ್ತಿರ ನಡೆದು ಬರುವುದನ್ನು ಕಂಡು ಗುಂಡು ಹಾರಿಸಿದ್ದರು. ಸ್ಟೀಫನ್ ಕೈಯಲ್ಲಿ ಮೊಬೈಲ್ ಫೋನ್ ಇತ್ತು. ಇದನ್ನು ಬಂದೂಕು ಎಂದು ತಿಳಿದು ಗುಂಡಿನ ದಾಳಿ ಮಾಡಿದ್ದರು. ನಂತರ ಡೆಪ್ಯೂಟಿಯನ್ನು ಕೆಲಸದಿಂದ ಸರಕಾರ ತೆಗೆದು ಹಾಕಿತ್ತು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.