ಸನ್ಮಾರ್ಗ ವಾರ್ತೆ
ನವದೆಹಲಿ,ಜೂ.16: ಕೊರೋನಾ ಸಾಂಕ್ರಾಮಿಕ ರೋಗವು ಕೊನೆಗೊಳ್ಳುವಂತೆ ಜನರು ಪೂಜೆಯಿಂದ ಹಿಡಿದು ವಿವಿಧ ತಂತ್ರಗಳನ್ನು ಮತ್ತು ವಿಚಿತ್ರ ಪ್ರತಿಜ್ಞೆಗಳನ್ನು ಮಾಡುತ್ತಿದ್ದಾರೆ. ಗುಜರಾತ್‌ನ ಸೂರತ್‌ನಲ್ಲಿ ಅಂತಹ ಒಂದು ಪ್ರಕರಣ ಹೊರಬಿದ್ದಿದ್ದು, ಇಲ್ಲಿನ ವ್ಯಾಪಾರಿಯೊಬ್ಬರು ತಾಪೀ ನದಿಗೆ ಪ್ರತಿದಿನ 500 ಕೆಜಿ ಮಂಜುಗಡ್ಡೆಯನ್ನು ಹಾಕುವ ಮೂಲಕ ತಣ್ಣಗಾಗಿಸುವ ಪ್ರತಿಜ್ಞೆ ಮಾಡಿದ್ದಾರೆ. ಐಸ್ ಹಾಕುವಾಗ, ವ್ಯಾಪಾರಿಯ ಕೆಲಸಗಾರನೊಬ್ಬನ ಬಳಿ ವಿಚಾರಿಸಿದಾಗ, ನಮ್ಮ ಮಾಲಕರು ಒಂದು ವಾರದಲ್ಲಿ 3500 ಕೆಜಿ ಮಂಜುಗಡ್ಡೆಯನ್ನು ನದಿಗೆ ಹಾಕಿರುವುದಾಗಿ ಹೇಳಿದರು.
ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












