30,000ಕ್ಕೂ ಹೆಚ್ಚು ಸಿಖ್ ರೈತರ ಭೂಮಿಯನ್ನು ಕಸಿದುಕೊಳ್ಳಲು ಯೋಗಿ ಆದಿತ್ಯನಾಥ್ ಸರ್ಕಾರದಿಂದ ಕ್ರಮ!

0
935

ಸನ್ಮಾರ್ಗ ವಾರ್ತೆ

ಚಂಡೀಗಢ,ಜೂ.16: ಕೊರೋನ ವೈರಸ್ ಸಾಂಕ್ರಾಮಿಕ ರೋಗದ ಭೀತಿಯ ನಡುವೆ ಮೂರು ತಲೆಮಾರುಗಳಿಂದ ರಾಜ್ಯದಲ್ಲಿ ವಾಸಿಸುತ್ತಿರುವ 30,000ಕ್ಕೂ ಹೆಚ್ಚು ಸಿಖ್ ರೈತರಿಂದ, ಕಷ್ಟಪಟ್ಟು ಸಂಪಾದಿಸಿದ ಕೃಷಿಯೋಗ್ಯ ಭೂಮಿಯನ್ನು ಕಸಿದುಕೊಳ್ಳಲು ಬಿಜೆಪಿ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಕ್ರಮ ಕೈಗೊಂಡಿದೆ. ರಾಂಪುರ್, ಬಿಜ್ನೌರ್ ಮತ್ತು ಲಖಿಂಪುರ ಜಿಲ್ಲೆಗಳ ಸುಮಾರು 17 ಗ್ರಾಮಗಳಿಂದ ಈ ಸಿಖ್ ರೈತರನ್ನು ಸ್ಥಳಾಂತರಿಸಲು ಉತ್ತರ ಪ್ರದೇಶ ಸರ್ಕಾರ ಪೊಲೀಸರನ್ನು ಕಳುಹಿಸಿದೆ ಎಂದು ತಿಳಿದು ಬಂದಿದೆ.

ಈ ಎಲ್ಲಾ ಸಿಖ್ ಕುಟುಂಬಗಳು 1947ರ ಇಂಡೋ-ಪಾಕ್ ವಿಭಜನೆಯ ಸಮಯದಲ್ಲಿ ನೇರವಾಗಿ ಉತ್ತರ ಪ್ರದೇಶದ ಈ ಗ್ರಾಮಗಳಿಗೆ ಸ್ಥಳಾಂತರಗೊಂಡು ಮತ್ತು ಕಷ್ಟಗಳನ್ನು ಸಹಿಸಿಕೊಂಡು ಈ ನಿರ್ಜನ ಕಾಡುಗಳನ್ನು ಕೃಷಿಯೋಗ್ಯ ಭೂಮಿಯಾಗಿ ಪರಿವರ್ತಿಸಿದವು. 1980ರಲ್ಲಿ, ಈ ಎಲ್ಲಾ ಸಿಖ್ ರೈತರಿಗೆ ಮಾಲೀಕತ್ವದ ಹಕ್ಕುಗಳನ್ನು ನೀಡಲಾಯಿತು. ಆದರೆ, ಈಗ ಕೇಸರಿ ಉತ್ತರ ಪ್ರದೇಶ ಸರ್ಕಾರವು ಈ ಸಿಖ್ ರೈತರನ್ನು ಸ್ಥಳಾಂತರಿಸುವ ಅಭಿಯಾನವನ್ನು ಹಠಾತ್ತನೆ ಪ್ರಾರಂಭಿಸಿದೆ.

ಉತ್ತರ ಪ್ರದೇಶ ಮತ್ತು ಉತ್ತರಾಖಂಡದ ಸಿಖ್ಖರ ಮುಖ್ಯಸ್ಥರಾಗಿರುವ ಜಸ್ವೀರ್ ಸಿಂಗ್ ವಿರ್ಕ್, ಜೂನ್ 3 ರಂದು ಸಿಖ್ಖರನ್ನು ಸ್ಥಳಾಂತರಿಸಲು ಯುಪಿ ಸರ್ಕಾರ ಜೆಸಿಬಿ ಯಂತ್ರಗಳೊಂದಿಗೆ ಗ್ರಾಮದ ಚಂಪತ್ಪುರಕ್ಕೆ ಪೊಲೀಸರನ್ನು ಕಳುಹಿಸಿದೆ ಎಂದು ಮಾಹಿತಿ ನೀಡಿದರು ಆದರೆ ಅವರು ತಮ್ಮ ಉದ್ದೇಶದಲ್ಲಿ ಯಶಸ್ವಿಯಾಗಲಿಲ್ಲ. “ಆದಾಗ್ಯೂ, ಪೊಲೀಸರು ನೂರಾರು ಇತರ ಪೊಲೀಸರೊಂದಿಗೆ ಹಿಂತಿರುಗಿ ಬಂದು ಚಂಪತ್ಪುರದ ಹಲವಾರು ಎಕರೆ ಪ್ರದೇಶದಲ್ಲಿ ಕಬ್ಬಿನ ಬೆಳೆಗಳನ್ನು ನಾಶಪಡಿಸಿದ್ದಾರೆ” ಎಂದು ಅವರು ಹೇಳಿದರು, ಚಂಪತ್ಪುರ್ ಗ್ರಾಮದ ಎಲ್ಲಾ 300 ಮನೆಗಳು ಸಿಖ್ಖರಿಗೆ ಸೇರಿದವುಗಳಾಗಿವೆ.

ಈ ಪ್ರದೇಶದ ಪಂಚಾಯತಿ ಭೂಮಿಯು ಬಹುಸಂಖ್ಯಾತ ಧರ್ಮಕ್ಕೆ ಸೇರಿದ ಜನರು ಅಕ್ರಮವಾಗಿ ಕಬಳಿಸಿದ್ದರೂ ಅವರ ವಿರುದ್ಧ ಕ್ರಮಕೈಗೊಳ್ಳದೇ, ಯುಪಿ ಸರ್ಕಾರವು ಇಲ್ಲಿನ ಸಿಖ್ಖರನ್ನು ನಿರ್ದಿಷ್ಟವಾಗಿ ಗುರಿಯಾಗಿಸಿ ರಾಜ್ಯ ಸಶಸ್ತ್ರ ಪೊಲೀಸ್ ಪಡೆಯ ಮೂಲಕ ವ್ಯವಹರಿಸುತ್ತಿದೆ ಎಂದು ಅವರು ಹೇಳಿದರು.

“ರಾನ್ ನಗರ ಗ್ರಾಮದಲ್ಲಿ ವಾಸಿಸುತ್ತಿರುವ ಸುಮಾರು 300 ಸಿಖ್ ಕುಟುಂಬಗಳು ಕಷ್ಟಪಟ್ಟು ಸಂಪಾದಿಸಿದ ಭೂಮಿಯನ್ನು ಸಹ ಪೊಲೀಸರು ಸ್ವಾಧೀನಪಡಿಸಿಕೊಳ್ಳಲು ಪ್ರಯತ್ನಿಸಿದರು ಆದರೆ ಗ್ರಾಮಸ್ಥರು ಅದನ್ನು ತಡೆದರು. ನಂತರ 35 ಗುರುತಿಸಲ್ಪಟ್ಟ ಮತ್ತು 250 ಅಪರಿಚಿತ ಸಿಖ್ಖರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ” ಎಂದು ಅವರು ಹೇಳಿದರು.

ಗುರುನಾನಕ್ ಸಾಗರ್ ಅಣೆಕಟ್ಟುಗಾಗಿ ಸಿಖ್ಖರಿಂದ ಕಸಿದುಕೊಂಡ 3000 ಎಕರೆಗಳಿಗೆ ಯಾವುದೇ ಪರಿಹಾರವನ್ನು ನೀಡಿಲ್ಲ ಎಂದು ವಿರ್ಕ್ ಮಾಹಿತಿ ನೀಡಿದರು. “ಈಗ, ಸುಮಾರು 30,000 ಸಿಖ್ ರೈತರು ಜಿಲ್ಲೆಯ ರಾಂಪುರದ 15 ಹಳ್ಳಿಗಳಲ್ಲಿ ಮಾತ್ರ ವಿನಾಶಕ್ಕೆ ಒಳಗಾಗುತ್ತಿದ್ದಾರೆ” ಎಂದು ಅವರು ಹೇಳಿದರು.

ಈ ರೈತರ ಹೆಚ್ಚಿನ ಪ್ರಕರಣಗಳು ಹೈಕೋರ್ಟ್‌ನಲ್ಲಿ ಬಾಕಿ ಇದೆ ಎಂದು ತಿಳಿದಿದ್ದರೂ ಯುಪಿ ಸರ್ಕಾರ ಯಾವುದೇ ಮುನ್ಸೂಚನೆಯಿಲ್ಲದೆ ಸಿಖ್ ರೈತರನ್ನು ಧ್ವಂಸ ಮಾಡುತ್ತಿದೆ” ಎಂದು ಅವರು ಹೇಳಿದರು.

ಈ ಕಠಿಣ ಸಮಯದಲ್ಲಿ ಸಿಖ್ಖರನ್ನು ಸ್ಥಳಾಂತರಿಸದಂತೆ ಮನವಿ ಮಾಡಿ ಅವರು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿರುವುದಾಗಿಯೂ ಅಲ್ಲದೇ ಅವರ ಮನವಿಯನ್ನು ತಿರಸ್ಕರಿಸಲಾಗಿದೆ ಎಂದು ವಿರ್ಕ್ ಮಾಹಿತಿ ನೀಡಿದರು.

ಜಸ್ವೀರ್ ಸಿಂಗ್ ವಿರ್ಕ್ ಈ ಸಿಖ್ ರೈತರಿಗಾಗಿ ಧ್ವನಿ ಎತ್ತಬೇಕೆಂದು ಮನವಿ ಮಾಡಿದರಲ್ಲದೇ ಈ ಧ್ವನಿಯಿಂದ ಮಾತ್ರ ಅವರು ತಮ್ಮ ಜಮೀನುಗಳಿಂದ ಸ್ಥಳಾಂತರಗೊಳ್ಳದಂತೆ ರಕ್ಷಿಸಬಹುದಾಗಿದೆ.

बिजनौर और लखीमपुर में सिख किसानों पर हो रहे अत्याचार को।सिख संगठन कतई बर्दाश्त नही करेगा ।

Posted by Sikh Sangathan Uttar Pradesh on Friday, June 5, 2020

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.