#ಟ್ರೋಲ್‌ಗೊಳಗಾಗುವ ಭಯ: ಪೆಟ್ರೋಲ್ ಬೆಲೆ ಏರಿಕೆಯ ಕುರಿತ ಹಳೆಯ ಟ್ವೀಟ್ ಡಿಲೀಟ್ ಮಾಡಿದ ನಟ ಅಕ್ಷಯ್‌ ಕುಮಾರ್!

0
1959

ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುವ 2018ರ ದಿ.ಪ್ರಿಂಟ್ ವರದಿ

ಸನ್ಮಾರ್ಗ ವಾರ್ತೆ

ನಟ ಅಕ್ಷಯ್ ಕುಮಾರ್ 2014 ರಲ್ಲಿ ಇಂಧನ ದರ ಏರಿಕೆಯನ್ನು ಖಂಡಿಸಿ ಯುಪಿಎ ಸರಕಾರವನ್ನು ಟೀಕಿಸಿದ್ದರು. 2014 ರಲ್ಲಿ ಅಕ್ಷಯ್ ಕುಮಾರ್, ಅನುಪಮ್ ಖೇರ್, ಪರೇಶ್ ರಾವಲ್ ಪೆಟ್ರೋಲ್ ದರ ಏರಿಕೆಯ ಕುರಿತು ಮಾಡಿದ ಟ್ವೀಟ್‌ಗಳು ಜನರನ್ನು ಮೋದಿ ಸರಕಾರದತ್ತ ಒಲವು ಹರಿಸಲು ಒಂದು ಹಂತದಲ್ಲಿ ಕಾರಣೀಭೂತವಾಗಿದ್ದವು.

ಆದರೇ, ಮೋದಿ ಸರಕಾರವು ಟೀಕೆಗಳನ್ನು ಹಗುರವಾಗಿ ಪರಿಗಣಿಸುವುದಿಲ್ಲ .ಯಾರು ಮೋದಿ ಸರಕಾರವನ್ನು ಟೀಕಿಸುತ್ತಾರೋ ಅವರು ಒಂದೋ ದೇಶದ್ರೋಹಿ ಗಳಾಗಿಬಿಡುತ್ತಾರೆ ಇಲ್ಲವೇ ಸಂಪ್ರದಾಯ ವಿರೋಧಿಗಳಾಗಿ ಮಾರ್ಪಡುತ್ತಾರೆ.

ಆದರೆ, ಪ್ರಸ್ತುತ ಬೆಲೆ ಏರಿಕೆಯ 2೦14 ರ ಟ್ವೀಟ್‌ಗಳನ್ನು ಬಳಸಿ ಮೋದಿ ಸರಕಾರದ ಬೆಲೆ ಏರಿಕೆಯನ್ನು ಖಂಡಿಸುತ್ತಿರುವುದು ಟ್ರೋಲ್ ಆಗುತ್ತಿದೆ. ನಟ ಅಕ್ಷಯ್ ಕುಮಾರ್ ಟ್ರೋಲ್‌ಗೀಡಾಗುವುದನ್ನು ತಪ್ಪಿಸಲು ತಮ್ಮ ಹಳೆಯ ಟ್ವೀಟ್‌ನ್ನು 2೦18 ರಲ್ಲಿ ಅಳಿಸಿಹಾಕಿರುವುದನ್ನು ಜನರು ಇನ್ನೂ ಮರೆತಿಲ್ಲ, ಜನರು ಯಾರ ವಿರುದ್ಧ ಹೇಗೆ ಮಾತನಾಡಬೇಕೆಂಬುದನ್ನು ಇವರಿಂದ ಕಲಿಯಿರಿ ಎನ್ನುತ್ತಿದ್ದಾರೆ.

ಜನಸಾಮಾನ್ಯರ ಬಗ್ಗೆ ಅಪಾರ ಕಾಳಜಿ ಇರುವಂತೆ ಕಂಡು ಬಂದ ಪ್ರಸಿದ್ಧ ನಟರ ಇಂಧನ ದರ ಏರಿಕೆ ವಿರೋಧಿ ಟ್ವೀಟ್‌ಗಳನ್ನು ಪ್ರಸ್ತುತ ಇಂಧನ ದರ ಏರಿಕೆಯ ಸಮಯದಲ್ಲಿ ಕಾಣದೇ ಇರುವುದು ಜನಸಾಮಾನ್ಯರ ಅರಿವಿಗೆ ಬಂದಿದೆ‌. ಹಣದುಬ್ಬರ, ಆರ್ಥಿಕ ಮುಗ್ಗಟ್ಟು, ತೆರಿಗೆ ಶುಲ್ಕಗಳಿಂದಾಗಿ ಇಂಧನ ಬೆಲೆ ಏರಿಕೆ ಮಾಡಲಾಗಿದೆ ಎಂದು ಒಂದು ಕಡೆ ಹೇಳಲಾಗುತ್ತಿದೆ.

ಆದರೆ, ಕರ್ನಾಟಕದಲ್ಲಿ ಚುನಾವಣೆಗೋಸ್ಕರ 20 ದಿನಗಳ ಕಾಲ ಬೆಲೆ ಏರಿಕೆ ನಡೆಸದೇ ತೀರ್ಮಾನ ತಡೆಹಿಡದಿರುವುದು ಆಡಳಿತ ವರ್ಗದ ಮೇಲೆ ಜನ ಸಾಮಾನ್ಯರಿಗೆ ಸಂಶಯ ಮೂಡುವಂತೆ ಮಾಡಿದೆ. ಒಂದು ವೇಳೆ ಸರಕಾರ ಇಷ್ಟು ದಿನಗಳ ಕಾಲ ಬೆಲೆ ಏರಿಕೆ ತಡೆಹಿಡಿಯಬಹುದೆಂದಾದಲ್ಲಿ ಕೋವಿಡ್-19 ಪರಿಸ್ಥಿತಿಯಿಂದ ಆರ್ಥಿಕ ಅಧೋಗತಿಯಾಗಿರುವಾಗ ಪರಿಸ್ಥಿತಿಯು ಸಾಮಾನ್ಯ ಮಟ್ಟಕ್ಕೆ ಬರುವವರೆಗೆ ಯಾಕೆ ಈ ತೀರ್ಮಾನವನ್ನು ಮುಂದುವರೆಸಬಾರದು ಎಂದು ಜನರು ಪ್ರಶ್ನಿಸುತ್ತಿದ್ದಾರೆ‌.

2014 ರಲ್ಲಿ ತೇಲ್ ಕಾ ತಡ್ಕಾ, ಮಾರ್ ದಿಯಾ ಮೆಹಂಗಾಯಿನೇ ಎಂಬ ಘೋಷ ವಾಕ್ಯಗಳು ಇಂಧನ ಬೆಲೆ ಏರಿಕೆ ವಿರುದ್ಧ ಪ್ರಸಿದ್ಧವಾಗಿದ್ದವು‌.

 

ಕೃಪೆ: ದಿ ಪ್ರಿಂಟ್

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.