ಸನ್ಮಾರ್ಗ ವಾರ್ತೆ
ಪ್ರತಿಕ್ರಿಯೆ
ಷಾ ಕುದ್ರಡ್ಕ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ನಿಂದ ಮರಣ ಹೊಂದಿದವರ ಧಫನ ಕಾರ್ಯದಲ್ಲಿ, #ಪಾಪ್ಯುಲರ್_ಫ್ರಂಟ್ ನ ಕಾರ್ಯಕರ್ತರ ಸೇವೆಯನ್ನು ಕಂಡು ಸಹಿಸಲಾಗದೆ ಅದನ್ನೇ ರಾಜಕೀಯವಾಗಿ ಮಾಡುತ್ತಿರುವುದು ವಿಷಾದಕರ ಸಂಗತಿ.
ಈ #ಕೋವಿಡ್_19 ನ ಸಂಧಿಗ್ಧ ಘಟ್ಟದಲ್ಲಿ ಪಾಪ್ಯುಲರ್ ಫ್ರಂಟ್ ದೇಶದಾದ್ಯಂತ ಮುನ್ನೂರಕ್ಕಿಂತಲೂ ಹೆಚ್ಚು ಕೋರೋನಾ ಬಾಧಿತ ಮೃತದೇಹಗಳ ಅಂತ್ಯ ಸಂಸ್ಕಾರಗಳನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ, ತಮ್ಮ ಒಂದು ಕರ್ತವ್ಯವಾಗಿ ನಿರ್ವಹಿಸಿಕೊಂಡು ಬಂದಿದೆ. ದೇಶದಾದ್ಯಂತ ಕೆಲಸ ಮಾಡುತ್ತಿರುವಾಗ ಚರ್ಚೆಯಾಗದ ವಿಷಯವು ಇದೀಗ ಮಂಗಳೂರಿನಲ್ಲಿ ಮಾತ್ರ ಸಂಘಟನೆಯೊಂದರ ಸಂಧರ್ಭೋಚಿತ ಚಟುವಟಿಕೆಯ ಮೇಲೆ ಗೂಬೆ ಕೂರಿಸುತ್ತಿರುವುದು ವಿಷಾದಕರ.
ನೈಜ ಸಂಗತಿ ಏನೆಂದು ತಿಳಿಯದ ಕೆಲ ಜನಸಾಮಾನ್ಯರು ತಿಳಿಯಬೇಕಾದ ಕೆಲ ಸಂಗತಿಗಳನ್ನು ಮುಂದಿಡಬೇಕಾಗಿದೆ.
ದೇಶಾದ್ಯಂತ ಕೊರೋನಾ ಹರಡುವ ಮುನ್ನವೇ ಪಾಪ್ಯುಲರ್ ಫ್ರಂಟ್ ತಮ್ಮ ಕಾರ್ಯಕರ್ತರಿಗೆ ಆಯಾಯ ರಾಜ್ಯ/ಜಿಲ್ಲೆಗಳಲ್ಲಿ ತರಬೇತಿ ನೀಡಿ ಕೋವಿಡ್ ವಾರಿಯರ್ಸ್ ಆಗಲು ಸಜ್ಜುಗೊಳಿಸಿತ್ತು. ಅದರ ಭಾಗವಾಗಿ ಮಂಗಳೂರಿನಲ್ಲೂ ಮಾರ್ಚ್ 16 ಕ್ಕೆ ಮಂಗಳೂರಿನ ಜಮೀಯತ್ ಫಲಾಹ್ ಹಾಲಿನಲ್ಲಿ ಸುಮಾರು 100 ರಷ್ಟು ಬರುವ ಸ್ವಯಂ ಸೇವಕರಿಗೆ ಸ್ಥಳೀಯ ನುರಿತ ವೈದ್ಯಾಧಿಕಾರಿಗಳ ನೇತೃತ್ವದಲ್ಲಿ ಕೋವಿಡ್ ವಾರಿಯರ್ಸ್ ಆಗಲು ತರಬೇತಿ ನೀಡಲಾಗಿತ್ತು.
ಇತ್ತೀಚಿನ ದಿನಗಳಲ್ಲಿ ವೆನ್ಲಾಕ್ ಆಸ್ಪತ್ರೆಯ ಸಹಕಾರದೊಂದಿಗೆ “ಕೋವಿಡ್ 19 ಮೃತದೇಹದ ಅಂತ್ಯಸಂಸ್ಕಾರ” ಕುರಿತು ಪ್ರಾತ್ಯಕ್ಷಿಕೆ, ವೈದ್ಯಕೀಯ ರಿವಾಜು, ಪ್ರೊಟೊಕೊಲ್ ಗಳ ತರಬೇತಿ ಶಿಬಿರವನ್ನೂ ಹಮ್ಮಿಕೊಂಡು ಅದಕ್ಕಾಗಿ ಮೂವತ್ತರಷ್ಟು ಸ್ವಯಂ ಸೇವಕರನ್ನು ಸಜ್ಜುಗೊಳಿಸಿತ್ತು.
ಮುಸ್ಲಿಮ್ ಮಯ್ಯತ್ ಗಳ ಸಂಬಂಧವಾಗಿ ಹೇಳುವುದಾದರೆ ಸರಕಾರಿ ನಿಯಮದಂತೆ ದಫನ ಭೂಮಿಯಲ್ಲಿ 10 ಅಡಿ ಖಬರ್ ಅಗೆಯಲು, ಇನ್ನಿತರ ಕೆಲಸಗಳನ್ನು ಯಾರು ಬೇಕಾದರೂ ಮಾಡಬಹುದು. ಆದರೆ ಒಮ್ಮೆ ಮೃತದೇಹ ತಲುಪಿದರೆ ಮುಂಜಾಗ್ರತಾ ಕೋಸ್ಟ್ಯೂಮ್ ಇಲ್ಲದೆ ದೇಹವನ್ನು ಮುಟ್ಟುವಂತೆಯೋ, ತೀರಾ ಹತ್ತಿರ ಹೋಗುವಂತೆಯೂ ಇಲ್ಲ.
PPE ಕಿಟ್ ಇಲ್ಲದೇ, ಸರಕಾರಿ ಅಧಿಕಾರಿಗಳ ಪರವಾನಿಗೆ ಇಲ್ಲದೇ ಕೊರೋನಾ ಬಾಧಿತ ಮೃತದೇಹಗಳ ಅಂತ್ಯ ಸಂಸ್ಕಾರಕ್ಕೆ ಸರಕಾರದ ಅನುಮತಿಯೂ ದೊರೆಯುವುದಿಲ್ಲ. ಇದೆಲ್ಲಾ ಅಡೆತಡೆಗಳನ್ನೂ ಲೆಕ್ಕಿಸದೆ ತಮ್ಮ ಎಲ್ಲಾ ಕೆಲಸಗಳನ್ನು ಬಿಟ್ಟು ಧಫನ ಕಾರ್ಯದಂತಹ ಪುಣ್ಯ ಕರ್ಮದಲ್ಲಿ ತರಬೇತಿ ಪಡೆದು ಸಮಾಜ ಸೇವೆಗೈದ ಆ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುವ ಬದಲು, ಸಾವಿನಲ್ಲೂ ರಾಜಕೀಯ ಮಾಡುವುದು ಶೋಚನೀಯವೇ ಸರಿ..
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












