ದೇಶದಲ್ಲಿ ಆಗಸ್ಟ್ 12ರವರೆಗೆ ರೈಲು ಸಂಚಾರ ಸ್ಥಗಿತ

0
434

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಜೂ.26: ದೇಶದಲ್ಲಿ ರೈಲು ಸಂಚಾರ ಆಗಸ್ಟ್ 12ರವರೆಗೆ ನಿಲ್ಲಿಸಲಾಗಿದೆ ಎಂದು ಭಾರತ ರೈಲ್ವೆ ತಿಳಿಸಿದೆ. ರಾಜಧಾನಿ, ಮೈಲ್, ಎಕ್ಸ್‌ಪ್ರೆಸ್ ರೈಲುಗಳ ವಿಶೇಷ ಸೇವೆಯು ಮುಂದುವರಿಯಲಿದೆ. ಜೂನ್ 30ರವರೆಗೆ ರೈಲು ಸೇವೆಯನ್ನು ನಿಲ್ಲಿಸಲಾಗಿತ್ತು.

ಮೇ 15ರಿಂದ ದೇಶದ ರೈಲು ಸೇವೆಗಳನ್ನು ಜೂನ್ 30ರವರೆಗೆ ನಿಲ್ಲಿಸಲು ರೈಲ್ವೆ ಮಂಡಳಿ ತೀರ್ಮಾನಿಸಿತ್ತು. ಜುಲೈ ಒಂದರಿಂದ ಆಗಸ್ಟ್ 12ರವರೆಗೆ ಬುಕ್ ಮಾಡಿದ ಟಿಕೆಟ್‍ಗಳನ್ನು ರದ್ದು ಮಾಡಿ ರೀಫಂಡ್ ನೀಡಲಾಗುವುದು. ವಿಶೇಷ ರೈಲುಗಳಲ್ಲಿ ಹೊದಿಕೆ ಕೊಡುವುದಿಲ್ಲ ಎಂಬ ನಿಲುವಿನಲ್ಲಿ ಬದಲಾವಣೆ ಮಾಡಿಲ್ಲ.

ಇದೇ ವೇಳೆ, ವಲಸೆ ಕಾರ್ಮಿಕರಿಗಾಗಿರುವ ರೈಲುಗಳ ಸಮಯದಲ್ಲಿ ಬದಲಾವಣೆ ಮಾಡಲಾಗಿಲ್ಲ. ಹೀಗೆ 239 ರೈಲುಗಳು ಓಡಾಡುತ್ತಿವೆ ಎಂದು ರೈಲು ಮಂಡಳಿ ಹೇಳಿಕೆಯನ್ನು ಹೊರಡಿಸಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.