ಸನ್ಮಾರ್ಗ ವಾರ್ತೆ
ಮಾನವ ಶರೀರಕ್ಕೆ ಅಗೌರವ ತೋರುವಂತೆ ದಫನ್ ನಡೆಸುವ ದ್ರಶ್ಯ ತುಂಬಾ ಖೇದಕರ, ಒಂದು ಮಾನವ ಶರೀರವನ್ನು ದಫನ್ ನಡೆಸುವ ಸಮಯದಲ್ಲಿ ಪಾಲಿಸಬೇಕಾದ ನಿಯಮಗಳು ಕರ್ಮ ಶಾಸ್ತ್ರ ಪಂಡಿತರು ವಿವರಿಸಿದ್ದಾರೆ. ಅದು ತಿಳಿದಿರುವ ಉಲಮಾ ನೇತಾರರಿಂದ ಕೇಳಿ ತಿಳಿಯುವ ಸೌಜನ್ಯ ತೋರಿ ಅದರಂತೆ ಪಾಲಿಸದಿದ್ದರೆ ಅದು ತಪ್ಪು ನಡವಳಿಕೆ ಅಂತ ತಿಳಿಯಬೇಕು.
ಮರಣಹೊಂದಿದ ಶರೀರವನ್ನು ದಫನ್ ಮಾಡಿ ನಂತರ ಆ ಶರೀರದ ಮೇಲೆ ಮಣ್ಣು ಹಾಕಿ ಮುಚ್ಚುವ ವೇಳೆ ಶರೀರದ ಮೇಲೆ ಬೀಳದಂತೆ ತಡೆ ನಿರ್ಮಾಣ ಮಾಡಬೇಕಾದ್ದು ಕಡ್ಡಾಯ.
ಪಾರ್ಥಿವ ಶರೀರಕ್ಕೆ ಮಣ್ಣು ಬೀಳುವ ರೀತಿಯಲ್ಲಿ ದಫನ್ ಮಾಡುವುದು ಹರಾಂ ಹಾಗೂ ಮಾನವ ಶರೀರಕ್ಕೆ ತೋರುವ ಅಗೌರವ ಕೂಡಾ ಆಗಿದೆ. ಇದು ಮಹಾ ಪಾಪವೂ ಹೌದು. ಆದ ಕಾರಣ ಸಾದ್ಯವಿದೆ ಎಂದಾದರೆ ಬಾಕ್ಸ್ ನಲ್ಲಿ ಇಟ್ಟು ದಫನ ಮಾಡಬೇಕಾಗುತ್ತದೆ.
ಮುಂದೆ ಈ ಬಗ್ಗೆ ಸಂಭಂದಪಟ್ಟವರು ಗಮನ ಹರಿಸ ಬೇಕೆಂದು ಈ ಮೂಲಕ ವಿನಂತಿಸುತ್ತಿದ್ದೇವೆ ಎಂದು ರಾಜ್ಯ ದಾರಿಮೀ ಉಲಮಾ ಒಕ್ಕೂಟ ಪತ್ರಿಕಾ ಪ್ರಕಟಣೆಯ ಮೂಲಕ ಕೋರಿದೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












