ಸನ್ಮಾರ್ಗ ವಾರ್ತೆ
ಕಾನ್ಪುರ,ಜು.3: ಉತ್ತರ ಪ್ರದೇಶದ ಕಾನ್ಪುರದ ಡಿವೈಎಸ್‍ಪಿ ಸಹಿತ ಎಂಟು ಪೊಲೀಸರನ್ನು ಗೂಂಡಾಗಳ ತಂಡ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ. ಕುಪ್ರಸಿದ್ಧ ಡಾನ್ ವಿಕಾಸ್ ದುಬೆಯನ್ನು ಹುಡುಕುವ ವೇಳೆ ಘಟನೆ ನಡೆದಿದೆ.
ಕಾನ್ಪುರ ದೇಹತ್ ಶಿವ್ಲಿ ಪೊಲೀಸ್ ಠಾಣೆ ವ್ಯಾಪ್ತಿಯ ಬಿಕ್ರು ಗ್ರಾಮದಲ್ಲಿ ಮಂಗಳವಾರ ಗುರುವಾರ ಮಧ್ಯರಾತ್ರೆ ಈ ಘಟನೆ ಸಂಭವಿಸಿದೆ. 60ರಷ್ಟು ಕ್ರಿಮಿನಲ್ ಕೇಸ್ ಹೊಂದಿರುವ ವಿಕಾಸ್ ದುಬೆ ಭೂಗತನಾಗಿದ್ದು, ಆತನನ್ನು ಹಿಡಿಯಲು ಪೊಲೀಸರು ಆತನ ಅಡಗುದಾಣಕ್ಕೆ ತೆರಳಿದ ವೇಳೆ ಕಟ್ಟಡದ ಮೇಲಿನಿಂದ ಗುಂಡು ಹಾರಿಸಲಾಗಿದೆ.
ಮೃತಪಟ್ಟವರಲ್ಲಿ ಡಿವೈಎಸ್ಪಿ, ಮೂವರು ಸಬ್ ಇನ್ಸ್‌ಪೆಕ್ಟರ್ ಮತ್ತು ನಾಲ್ವರು ಕಾನ್ಸ್‌ಟೇಬಲ್‍ಗಳು ಸೇರಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಫಾರನ್ಸಿಕ್ ತಜ್ಞರು ಸ್ಥಳ ಪರಿಶೀಲನೆ ನಡೆಸಿದೆ.
ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












