ಮಂಗಳೂರು: ಸೆಂಟ್ರಲ್‍ ರೈಲ್ವೆ ನಿಲ್ದಾಣದಲ್ಲಿ ಮತ್ತೆ ಐವರಿಗೆ ಕೊರೋನ

0
550

ಸನ್ಮಾರ್ಗ ವಾರ್ತೆ

ಮಂಗಳೂರು,ಜು.3: ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದ ಐವರಿಗೆ ಕೊರೋನ ಇರುವುದು ದೃಢವಾಗಿದ್ದಹ ಮೂಲತಃ ಇವರು ಕೇರಳದವರು. ಇದರೊಂದಿಗೆ ಇಲ್ಲಿ ಸೋಂಕು ದೃಢಪಟ್ಟಿರುವವರ ಸಂಖ್ಯೆ 7 ಕ್ಕೇರಿಕೆಯಾಗಿದೆ.

ಈ ಹಿಂದೆ ಸೋಂಕು ತಗುಲಿದ ಇಬ್ಬರ ಸಹಿತ ಎಲ್ಲರೂ ರೈಲ್ವೆ ಕ್ವಾಟ್ರಸ್‍ನಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು. ಹೊಸದಾಗಿ ರೋಗ ದೃಢಪಟ್ಟ ಐವರಲ್ಲಿ ರೋಗ ಲಕ್ಷಣಗಳಿರಲಿಲ್ಲ. ಕೊರೋನ ದೃಢಪಟ್ಟಿರುವವರನ್ನು ಮಂಗಳೂರಿನ ದೇರಳಕಟ್ಟೆ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ನಾಲ್ವರು ಮೆಕಾನಿಕಲ್ ಸಿಬ್ಬಂದಿಗಳು ಒಬ್ಬ ಇಲಕ್ಟ್ರಿಕ್ ನೌಕರನಿದ್ದು, ಇವರು ಕೋಝಿಕ್ಕೋಡ್ ಹಾಗೂ ಪಾಲಕಾಡ್ ಭಾಗದವರು.

ಹೆಚ್ಚು ಮಂದಿಗೆ ಕೊರೋನ ದೃಢಪಟ್ಟ ಹಿನ್ನೆಲೆಯಲ್ಲಿ ಮಂಗಳೂರು ರೈಲ್ವೆ ನಿಲ್ದಾಣದ ವಿವಿಧ ಕೆಲಸ ಕಾರ್ಯಗಳನ್ನು ನಿಲ್ಲಿಸಲಾಗಿದೆ. ಸೋಂಕಿನ ಲಕ್ಷಣಗಳಿರುವವರು ಕೂಡಲೇ ರೈಲ್ವೆ ಆಸ್ಪತ್ರೆಗೆ ತಿಳಿಸಬೇಕೆಂದು ಸೂಚನೆ ನೀಡಲಾಗಿದೆ. ಹೆಚ್ಚು ಮಂದಿಯಲ್ಲಿ ಸೋಂಕು ಕಂಡು ಬಂದದ್ದರಿಂದ ಎಲ್ಲ ನೌಕರರನ್ನೂ ಕೊರೋನ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಮಂಗಳೂರು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.