ಸನ್ಮಾರ್ಗ ವಾರ್ತೆ
ಕೊಚ್ಚಿ,ಜು.4: ವಿದೇಶ ರಾಷ್ಟ್ರಗಳು ಸ್ವೀಕರಿಸಲು ಸಿದ್ಧರಿರುವಾಗ ಭಾರತದಿಂದ ಪ್ರಯಾಣಕ್ಕೆ ಅನುಮತಿ ನೀಡದೇ ನಿಯಂತ್ರಣವೊಡ್ಡಿದ್ದು ಯಾಕೆ ಎಂದು ಕೇಂದ್ರ ಸರಕಾರವನ್ನು ಹೈಕೋರ್ಟು ಪ್ರಶ್ನಿಸಿದೆ. ವಿಮಾನ ನಿಲ್ದಾಣ ತೆರೆದಿರುವ ದೇಶಗಳಿಗೆ ಹೋಗಲು ಭಾರತದಿಂದ ಅನುಮತಿ ನೀಡುವ ವೀಸಾ ಕಾಲಾವಧಿಯ ನಿಯಂತ್ರಣ ಕುರಿತು ಸ್ಪಷ್ಟವಾದ ಸ್ಪಷ್ಟೀಕರಣ ನೀಡಬೇಕೆಂದು ಕೇಂದ್ರ ಗೃಹ ಕಾರ್ಯದರ್ಶಿ, ವಿದೇಶ ಸಚಿವಾಲಯ, ವಾಯು ಯಾನ ಸಚಿವಾಲಯಗಳಿಗೆಜ ಸ್ಟಿಸ್ ಅನು ಶಿವರಾಮನ್ ಆದೇಶಿಸಿದ್ದಾರೆ.
ಮೂರು ತಿಂಗಳಾದರು ವೀಸಾ ಸಮಯ ಉಳಿದಿರುವ ಭಾರತೀಯರಿಗೆ ಮಾತ್ರ ವಿದೇಶಕ್ಕೆ ಹೋಗಲು ಅನುಮತಿ ನೀಡುವ ವೀಸಾ ನೀತಿಯನ್ನು ಪ್ರಶ್ನಿಸಿ ಕಲ್ಲಿಕೋಟೆಯ ಫಝಲುರ್ರಹ್ಮಾನ್, ಶಮೀಮ್ ಸಲ್ಲಿಸಿದ ಅರ್ಜಿಯಲ್ಲಿ ವಿಚಾರಣೆಗೆತ್ತಿಕೊಂಡ ಕೋರ್ಟು ಕೇಂದ್ರ ಸರಕಾರದ ಮುಂದೆ ಈ ಪ್ರಶ್ನೆ ಇರಿಸಿದೆ.
ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಸಂಬಂಧಿಸಿ ಮೇ 24ಕ್ಕೆ ಘೋಷಿತ ಸ್ಟಾಡಂರ್ಡ್ ಪ್ರೊಟೊಕಾಲ್ನಲ್ಲಿ ತಿದ್ದು ಮಾಡಿ ಜೂನ್ 1ಕ್ಕೆ ಹೊರಡಿಸಿದ ಆಫೀಸ್ ಮೆಮರಾಂಡಂ ಹಿಂಪಡೆಯಬೇಕೆಂದು ಮತ್ತು ನಿಯಂತ್ರಣವಿಲ್ಲದೇ ನಿಶ್ಶರ್ತವಾಗಿ ಅರ್ಜಿದಾರರು ಮುಂತಾದವರಿಗೆ ವಿದೇಶಕ್ಕೆ ಪ್ರಯಾಣಿಸಲು ಅನುಮತಿ ನೀಡಲು ಆದೇಶಿಸಬೇಕೆಂದು ಅರ್ಜಿದಾರರು ಆಗ್ರಹಿಸಿದ್ದಾರೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












