ಆಂಬುಲೆನ್ಸ್‌ನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಅನಿವಾಸಿ: ಯತ್ನ ವಿಫಲ

0
872

ಸನ್ಮಾರ್ಗ ವಾರ್ತೆ

ಕೇರಳ,ಜು.9: ವಿಮಾನ ನಿಲ್ದಾಣದಿಂದ ಮೆಡಿಕಲ್ ಕಾಲಾಜಾಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ವಿದೇಶದಿಂದ ಬಂದ ವ್ಯಕ್ತಿಯೊಬ್ಬ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಬುಧವಾರ ರಾತ್ರೆ ಒಂಬತ್ತು ಗಂಟೆಗೆ ರಾಷ್ಟ್ರೀಯ ಹೆದ್ದಾರಿ ಪುಳಿಂಚೋಡಿ ಕವಲ ಎಂಬಲ್ಲಿ ಘಟನೆ ನಡೆದಿದೆ.

ವಿದೇಶದಿಂದ ಬಂದಿದ್ದ ಈತನಿಗೆ ಜ್ವರ ಇತ್ತು. ಹೆಚ್ಚಿನ ಪರೀಕ್ಷೆಗಾಗಿ ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಕೊರೋನ ದೃಢಪಡದ್ದರಿಂದಾಗಿ ಈತನನ್ನು ಚಾಲಕನ ಬದಿಯ ಸೀಟಲ್ಲಿ ಕುಳಿತುಕೊಳಿಸಲಾಗಿತ್ತು. ಪುಳಿಂಚೋಡಿ ಎಂಬಲ್ಲಿಗೆ ಬಂದಾಗ ಚಾಲಕನಿಗೆ ಈತ ಹೊಡೆದು, ಆಂಬುಲೆನ್ಸ್‌ನ ಸ್ಪೀಡ್ ಕಡಿಮೆಯಾದಂತೆ ಇಳಿದು ಓಡಲು ಶ್ರಮಿಸಿದ್ದಾನೆ. ಕೂಡಲೇ ಚಾಲಕ ಕೆಳಗಿಳಿದು ಈತನನ್ನು ಹಿಡಿದಿದ್ದಾನೆ. ಘಟನೆ ತಿಳಿದ ಬಳಿಕ ಸಿಐಟಿಯು ನಾಯಕ ಪಿಎಂ ಸಹೀರ್ ಮತ್ತು ಊರವರ ಪೊಲೀಸರ ಸಹಾಯದಲ್ಲಿ ಅಂಬುಲೆನ್ಸ್‌ನ ಹಿಂಬದಿಯಲ್ಲಿ ಕೂರಿಸಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಯ್ತು‌.

ಓದುಗರೇ, ಸನ್ಮಾರ್ಗ ಫೇಸ್‌ಬುಕ್‌ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.

ಪ