ವಿಕಾಸ್ ದುಬೆ ಬಂಧನ; ಇಬ್ಬರು ಸಂಗಡಿಗರ ಎನ್‍ಕೌಂಟರ್

0
1257

ಸನ್ಮಾರ್ಗ ವಾರ್ತೆ

ಲಕ್ನೊ,ಜು.9: ಕಾನ್ಪುರ ಎನ್‍ಕೌಂಟರ್‌ನ ಮುಖ್ಯ ಆರೋಪಿ ಮತ್ತು ಗೂಂಡಾ ವಿಕಾಸ್ ದುಬೆಯನ್ನು ಬಂಧಿಸಲಾಗಿದೆ. ಮಧ್ಯಪ್ರದೇಶದ ಉಜ್ಜೈನಿಯಿಂದ ಬಂಧಿಸಿ ತರಲಾಗಿದೆ ಮತ್ತು ಈತನ ಇಬ್ಬರು ಸಹಚರರು ಪೊಲೀಸರ ಎನ್‍ಕೌಂಟರಿನಲ್ಲಿ ಕೊಲೆಯಾಗಿದ್ದಾರೆ. ಬೌವ ದುಬೆ, ಪ್ರಭಾತ್ ಮಿಶ್ರ ಗುರುವಾರ ಬೆಳಗ್ಗೆ ಹತ್ಯೆಯಾದರು. ಇಟಾವದಲ್ಲಿ ಉತ್ತರಪ್ರದೇಶ ಪೊಲೀಸರು ಮತ್ತು ವಿಶೇಷ ಟಾಸ್ಕ್ ಪೋರ್ಸ್‌ನ ಜಂಟಿ ಕಾರ್ಯಾಚರಣೆಯ ವೇಳೆ ಸಂಘರ್ಷ ನಡೆದ ವೇಳೆ ಬೌವ ದುಬೆ ಗುಂಡಿಗೆ ಆಹುತಿಯಾಗಿದ್ದಾನೆ.

ಈ ತಿಂಗಳು ಮೂರನೇ ತಾರೀಕಿಗೆ ಬಿಕ್ರುನಲ್ಲಿ ನಡೆದ ಘರ್ಷಣೆಯಲ್ಲಿ ಎಂಟು ಪೊಲೀಸರು ಕೊಲೆಯಾದ ಘಟನೆಯಲ್ಲಿ ವಿಕಾಸ್ ದುಬೆಯ ಜೊತೆ ಬೌವ ದುಬೆ ಇದ್ದ. ಈತನ ತಲೆಗೆ 50,000 ಬಹುಮಾನ ಘೋಷಿಸಲಾಗಿತ್ತು. ಕಾನ್‍ಪುರದ ಸಮೀಪದಲ್ಲಿ ನಡೆದ ಎನ್‍ಕೌಂಟರ್‌ನಲ್ಲಿ ಪ್ರಭಾತ್ ಮಿಶ್ರ ಕೊಲೆಯಾಗಿದ್ದಾನೆ. ಈತನನ್ನು ಹರಿಯಾಣ ಪೊಲೀಸರು ಬಂಧಿಸಿದ್ದರು. ಪ್ರಭಾತ್ ಮಿಶ್ರನನ್ನು ಹೆಚ್ಚಿನ ವಿಚಾರಣೆಗಾಗಿ ಉತ್ತರಪ್ರದೇಶಕ್ಕೆ ಕರೆದುಕೊಂಡು ಹೋಗುವಾಗ ಸಂಘರ್ಷ ನಡೆದು ಈತ ಹತನಾದ ಎಂದು ಪೊಲೀಸರು ತಿಳಿಸಿದರು.

ದಾರಿ ಮಧ್ಯೆ ಪ್ರಾಂಕಿಯಲ್ಲಿ ಇವರು ಹೋಗುತ್ತಿದ್ದ ವಾಹನದ ಟಯರ್ ಪಂಕ್ಚರ್ ಆಗಿತ್ತು. ಈ ವೇಳೆ ಪ್ರಭಾತ್ ಮಿಶ್ರ ಪೊಲೀಸಧಿಕಾರಿಯ ಕೈಯಲ್ಲಿದ್ದ ಬಂದೂಕನ್ನು ಕಿತ್ತು ಗುಂಡು ಹಾರಿಸಿ ಪರಾರಿಯಾಗಲು ನೋಡಿದ್ದಾನೆ. ಟಾಸ್ಕ್ ಪೋರ್ಸ್ ಅಧಿಕಾರಿಗಳು ಸ್ವರಕ್ಷಣೆಗಾಗಿ ಆರೋಪಿಗೆ ಗುಂಡು ಹಾರಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ಗಂಭೀರ ಗಾಯಗೊಂಡ ಪ್ರಭಾತ ಮಿಶ್ರ ನಂತರ ಮೃತಪಟ್ಟನು ಎನ್ನಲಾಗಿದೆ. ಘರ್ಷಣೆಯಲ್ಲಿ ಇಬ್ಬರು ಎಸ್‍ಟಿಎಫ್ ಅಧಿಕಾರಿಗಳೂ ಗಾಯಗೊಂಡಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್‌ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.