ಸನ್ಮಾರ್ಗ ವಾರ್ತೆ
ನವದೆಹಲಿ,ಜು.19: ಕೋವಿಡ್-19 ಸಾಂಕ್ರಾಮಿಕ ರೋಗದ ಸಂದಿಗ್ಧ ಪರಿಸ್ಥಿತಿಯಲ್ಲಿ ದೇಶಾದ್ಯಂತ ಶಿಕ್ಷಣ ಸಂಸ್ಥೆಗಳು ಮತ್ತು ಶಿಕ್ಷಣ ವ್ಯವಸ್ಥೆಯನ್ನು ಸುಗಮವಾಗಿ ನಡೆಸಲು ಜಮಾಅತೆ ಇಸ್ಲಾಮೀ ಹಿಂದ್ ನ ಕೇಂದ್ರ ಶಿಕ್ಷಣ ಮಂಡಳಿಯು ಮಾನವ ಸಂಪನ್ಮೂಲ ಸಚಿವರಿಗೆ ವಿವಿಧ ಸಲಹೆಗಳನ್ನು ಪ್ರಸ್ತಾಪಿಸಿದೆ.
ಕೇಂದ್ರ ಎಚ್‌ಆರ್‌ಡಿ ಸಚಿವ ಡಾ.ರಮೇಶ್ ಪೋಖ್ರಿಯಾಲ್ ರವರಿಗೆ ಬರೆದ ಪತ್ರದಲ್ಲಿ, ಜಮಾಅತ್‌ನ ಕೇಂದ್ರ ಶಿಕ್ಷಣ ಮಂಡಳಿಯ ಅಧ್ಯಕ್ಷರಾದ ನುಸ್ರತ್ ಅಲಿ ಯವರು ಭಾರತದ ಶಿಕ್ಷಣ ವ್ಯವಸ್ಥೆಯ ಮೇಲೆ COVID-19 ಸಾಂಕ್ರಾಮಿಕದ ಋಣಾತ್ಮಕ ಪರಿಣಾಮವನ್ನು ನಿವಾರಿಸಲು ತಜ್ಞರೊಂದಿಗೆ ನಡೆದ ವ್ಯಾಪಕ ಚರ್ಚೆಯು ನಡೆದ ಬಳಿಕ ವಿವಿಧ ಸಲಹೆಗಳನ್ನು ಪ್ರಸ್ತಾಪಿಸಿದ್ದಾರೆ.
ಖಾಸಗಿ ಶಾಲಾ ಶಿಕ್ಷಕರಿಗೆ ಪಿಎಂ ಕೇರ್ಸ್ ಫಂಡ್ ಅಥವಾ ಇನ್ನಾವುದೇ ಸಂಬಂಧಿತ ಯೋಜನೆಯಿಂದ ಸರ್ಕಾರ ಸಹಾಯ ಮಾಡಬೇಕೆಂದು ಜಮಾಅತ್‌ನ ಶೈಕ್ಷಣಿಕ ಮಂಡಳಿ ಒತ್ತಾಯಿಸಿದೆ.
“ಪ್ರಾವಿಡೆಂಟ್ ಫಂಡ್ ಇಲಾಖೆ(ಪಿಎಫ್) / ಇಪಿಎಫ್‌ಒ ಖಾಸಗಿ ಶಾಲೆಗಳ ಶಿಕ್ಷಕರಿಗೆ ಮೂರು ವರ್ಷಗಳ ಕಾಲಾವಧಿಯಲ್ಲಿ ಬಡ್ಡಿರಹಿತ ಸಾಲವನ್ನು ನೀಡಬೇಕು. ಅಲ್ಲದೇ, ಸಣ್ಣ ಖಾಸಗಿ ಶಾಲೆಗಳಿಗೆ ಸರ್ಕಾರವು ಬಡ್ಡಿರಹಿತ ಸಾಲವನ್ನು ನೀಡಬೇಕು. ಏಕೆಂದರೆ ಅದು ಎಂಎಸ್‌ಎಂಇ ಸಾಲದ ಪ್ರಕಾರ ಯೋಜನೆಯನ್ನು ರೂಪಿಸಿದೆ” ಎಂದು ಜಮಾಅತ್ ಆಗ್ರಹಿಸಿದೆ.
ಜಮಾಅತ್ ಮಂಡಳಿಯ ಅಧ್ಯಕ್ಷರು ತಮ್ಮ ಪತ್ರದಲ್ಲಿ, ಹೋಮ್ ಸ್ಕೂಲಿಂಗ್ ವ್ಯವಸ್ಥೆಯನ್ನು ಹೆಚ್ಚಿಸಲು ಸರ್ಕಾರಕ್ಕೆ ಸೂಚಿಸಿದ್ದಾರಲ್ಲದೇ, ಅದನ್ನು ನಿಯಂತ್ರಿಸಲು ಮತ್ತು ಸುಗಮಗೊಳಿಸಲು ಅಗತ್ಯವಿರುವ ಬೇಡಿಕೆಗಳನ್ನು ಪೂರೈಸಬೇಕೆಂದು ತಿಳಿಸಿದೆ.
ಕೇಂದ್ರ ಸರ್ಕಾರದ ಸಹಕಾರದೊಂದಿಗೆ ಎಲ್ಲಾ ರಾಜ್ಯ ಸರ್ಕಾರಗಳು ಆನ್‌ಲೈನ್ ಬೋಧನಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಬೇಕು ಎಂದು ಜಮಾಅತ್ ನ ಶಿಕ್ಷಣ ಮಂಡಳಿಯು ಒತ್ತಾಯಿಸಿದೆ.
“ಆನ್‌ಲೈನ್ ವಿಷಯವನ್ನು ಆಯಾ ಸರ್ಕಾರಗಳು ಅಭಿವೃದ್ಧಿಪಡಿಸಬೇಕು. ಸರ್ಕಾರವು ದೂರದರ್ಶನ/ಟಿವಿ ಚಾನೆಲ್‌ಗಳಲ್ಲಿ ವಿಷಯಗಳ ಪಾಠಗಳನ್ನು ಪ್ರಸಾರ ಮಾಡಬೇಕು ಮತ್ತು ಅದು ಆನ್‌ಲೈನ್‌ನಲ್ಲಿ ಲಭ್ಯವಿರುವಂತಾಗಬೇಕು. ಸ್ಮಾರ್ಟ್‌ಫೋನ್ ಹೊಂದಿಲ್ಲದ ವಿದ್ಯಾರ್ಥಿಗಳಿಗೆ ಸರ್ಕಾರವು ಸೀಮಿತ ಡಾಟಾ ಸೌಲಭ್ಯವನ್ನು ಒದಗಿಸಬೇಕೆಂಬ ಬೇಡಿಕೆಯನ್ನು ಮಂಡಳಿಯು ಇರಿಸಿದೆ.
ಈ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ಕಾರ್ಪೊರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿಯ (ಸಿಎಸ್ಆರ್) 60% ನಿಧಿಯನ್ನು ಶಿಕ್ಷಣ ಸಂಸ್ಥೆಗಳು ಮತ್ತು ಶಿಕ್ಷಣ ವ್ಯವಸ್ಥೆಗೆ ನಿಯೋಜಿಸಲು ಜಮಾಅತ್ ಮಂಡಳಿ ಶಿಫಾರಸು ಮಾಡಿದೆ.
“ಅಭಿವೃದ್ಧಿ ಉದ್ದೇಶಗಳಿಗಾಗಿ ಬಳಸಲಾಗುತ್ತಿರುವ ಸಿಎಸ್ಆರ್ ನಿಧಿಯನ್ನು ಈ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ದೇಶಾದ್ಯಂತದ ಶಿಕ್ಷಣ ಸಂಸ್ಥೆಗಳು ಮತ್ತು ಶಿಕ್ಷಣ ವ್ಯವಸ್ಥೆಗೆ ಹಂಚಿಕೆ ಮಾಡಬಹುದಾಗಿದ್ದು, ಇದರಲ್ಲಿ 60% ರಷ್ಟು ಸೀಲಿಂಗ್ ವ್ಯವಸ್ಥೆ ಇದೆ” ಎಂದು ಮಂಡಳಿಯು ಹೇಳಿದೆ.
ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












