ದೇಶದಲ್ಲಿ 6.75 ಲಕ್ಷಕ್ಕೂ ಅಧಿಕ ಕೋವಿಡ್ ಪ್ರಕರಣಗಳಲ್ಲಿ ಚೇತರಿಕೆ; ಶೇ.63 ಕ್ಕೆ ಏರಿದ ಚೇತರಿಕೆ ದರ

0
493

ಸನ್ಮಾರ್ಗ ವಾರ್ತೆ

ನವದೆಹಲಿ,ಜು.‌19: ದೇಶಾದ್ಯಂತ ಶನಿವಾರ 38,000 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದು ಒಂದೇ ದಿನದಲ್ಲಿ ವರದಿಯಾದ ದಾಖಲೆಯ ಹೊಸ ಕೋವಿಡ್ -19 ಸೋಂಕು ಪ್ರಕರಣಗಳು ಗರಿಷ್ಠ ಮಟ್ಟಕ್ಕೆ ಏರಿದೆ ಎಂದು ವರದಿಯಾಗಿದೆ. ಅಲ್ಲದೇ, 545 ಜನರು ಕೊರೋನ ಸೋಂಕಿನಿಂದಾಗಿ ಮೃತರಾಗಿದ್ದು ಒಟ್ಟು ಕೋವಿಡ್ ಮೃತರ ಸಂಖ್ಯೆಯು ಸುಮಾರು 27,000 ಕ್ಕೆ ತಲುಪಿದೆ.

ದೇಶದಲ್ಲಿ ಕೋವಿಡ್ ಪ್ರಕರಣಗಳು 10 ಲಕ್ಷ ದಾಟಿದ ಎರಡು ದಿನಗಳ ಬಳಿಕ ಭಾರತದ ಕೋವಿಡ್ -19 ಸೋಂಕಿತರ ಸಂಖ್ಯೆಯು ಶನಿವಾರ 10,76,861 ಕ್ಕೆ ತಲುಪಿದೆ.

ದೇಶದಲ್ಲಿ 3.74 ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿದ್ದು, ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ 6.75 ಲಕ್ಷಕ್ಕೂ ಹೆಚ್ಚಾಗಿದೆ.

ಕಳೆದ ಕೆಲವು ದಿನಗಳಲ್ಲಿ ಒಟ್ಟು ಪ್ರಕರಣಗಳಲ್ಲಿ ಚೇತರಿಸಿಕೊಂಡವರ ಪಾಲು 63% ರಷ್ಟಿದೆ, ಏಕೆಂದರೆ ಹೊಸ ಸೋಂಕು ವರದಿಗಳ ಹೆಚ್ಚಳದಿಂದಾಗಿ ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.