ಸನ್ಮಾರ್ಗ ವಾರ್ತೆ
ವಿಜಯಪುರ ,ಜು.20: ಮೇಲ್ಜಾತಿಯ ಮಾಲಿಕನ ಮೋಟಾರುಬೈಕನ್ನು ಸ್ಪರ್ಶಿಸಿದ್ದಕ್ಕಾಗಿ 32 ವರ್ಷದ ದಲಿತ ವ್ಯಕ್ತಿಯೊಬ್ಬನ ಮೇಲೆ 13 ಯುವಕರ ಗುಂಪೊಂದು ಹಲ್ಲೆ ಮಾಡಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
“ದಲಿತ ಸಂತ್ರಸ್ತ(ಕಾಶಿನಾಥ್ ತಳ್ವಾರ್) ನೀಡಿದ ದೂರಿನ ಮೇರೆಗೆ ನಾವು ಜುಲೈ 18 ರಂದು ತಾಳಿಕೋಟೆ ಬಳಿಯ ಮಿಣಜಗಿ ಗ್ರಾಮದಲ್ಲಿ ಸಂಭವಿಸಿದ ಘಟನೆಯಲ್ಲಿ 13 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ ಮತ್ತು ತನಿಖೆ ನಡೆಸುತ್ತಿದ್ದೇವೆ” ಎಂದು ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರ್ವಾಲ್ ಇಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
“ಅಕಸ್ಮಾತ್ ಕಣ್ತಪ್ಪಿನಿಂದಾಗಿ ಬೈಕು ಮುಟ್ಟಿದ್ದಾಗಿಯೂ ತನ್ನ ಮೇಲೆ ಕರುಣೆತೋರುವಂತೆಯೂ ತಳ್ವಾರ್ ಮನವಿ ಮಾಡಿದರೂ, ಆರೋಪಿಗಳು ಆತನನ್ನು ಕೋಲುಗಳು ಮತ್ತು ಪಾದರಕ್ಷೆಗಳಿಂದ ತೀವ್ರವಾಗಿ ಥಳಿಸಿದ್ದಾರೆ. ಅಸಹಾಯಕನಾಗಿ ರಸ್ತೆಗೆ ಬಿದ್ದಾಗ ಆತನ ಪ್ಯಾಂಟ್‌ನ್ನು ತೆಗೆದರು” ಎಂದು ಅಗರ್ವಾಲ್ ಸಂತ್ರಸ್ತ ನೀಡಿದ ದೂರಿನ ಎರಡನೇ ಪುಟದಲ್ಲಿದ್ದ ವಿಷಯವನ್ನು ತಿಳಿಸಿದ್ದಾರೆ.
ಹಲ್ಲೆಯ ವಿಡಿಯೋ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಮೇಲ್ಜಾತಿಯ ಆರೋಪಿಗಳ ವಿರುದ್ಧ ಜಿಲ್ಲೆಯಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು, ಸಂತ್ರಸ್ತನ ಪೋಷಕರು ಹಲ್ಲೆ ನಡೆಸದಂತೆ ಕೇಳಿಕೊಂಡರೂ ದುಷ್ಕರ್ಮಿಗಳು ಹಲ್ಲೆನಡೆಸುವುದನ್ನು ಮುಂದುವರೆಸಿದ್ದರು.
“ಎಸ್‌ಸಿ/ಎಸ್‌ಟಿ ಕಾಯ್ದೆ ಮತ್ತು ಐಪಿಸಿ (ಭಾರತೀಯ ದಂಡ ಸಂಹಿತೆ)ಯ ಸೆಕ್ಷನ್‌ಗಳ ಅಡಿಯಲ್ಲಿ ಹಲ್ಲೆಯ ದೂರಿನ ಮೇರೆಗೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ” ಎಂದು ಅಗರ್ವಾಲ್ ಹೇಳಿದ್ದಾರೆ.
ತಳ್ವಾರ್ ಅವರ ತಂದೆ ಯಂಕಪ್ಪಾ ಅವರು ಹೇಳುವಂತೆ, ಅವನ ಮೇಲೆ ಹಲ್ಲೆ ಮಾಡದಂತೆ ರಕ್ಷಿಸಲು ಮುಂದಾದ ಆತನ ಪತ್ನಿ ಮತ್ತು ಮಗಳ ಮೇಲೆಯೂ ಸಹ ಆರೋಪಿಗಳು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಬೆಳವಣಿಗೆಯ ನಡುವೆ, ಹಳ್ಳಿಯ ಇಬ್ಬರು-ಮೂವರು ಮಹಿಳೆಯರು ತಳ್ವಾರ್ ವಿರುದ್ಧ ಕೀಟಲೆ ಆರೋಪ ಹೊರಿಸಿದ್ದು, ಆತನ ನಡವಳಿಕೆ ಸರಿ ಇಲ್ಲವೆಂದೂ ಆತ ತನ್ನ ಗುಂಪ್ತಾಂಗಗಳನ್ನು ತೋರಿಸುತ್ತಾ ವಿಕೃತಿ ಮೆರೆಯುತ್ತಿದ್ದನೆಂದು ಆರೋಪಿಸಿದ್ದಾಗಿ ಅಗರ್ವಾಲ್ ಹೇಳಿದ್ದಾರೆ.
ತಳ್ವಾರ್ ಗ್ರಾಮದಲ್ಲಿ ದೈನಂದಿನ ಕೂಲಿ ಕಾರ್ಮಿಕನಾಗಿದ್ದಾನೆ.
A person was stripped and thrashed by a group of people after he allegedly touched a bike belonging to an upper caste person. This happened on July 18 in #Karnataka’s #Vijayapura. Case registered under SC/ST Act and other sections of IPC. pic.twitter.com/9iPCXhpxiu
— Shashi Shekara 🇮🇳 (@shashi_shekara) July 20, 2020
ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












