ಕೋವಿಡ್‌ ಸೋಂಕಿನಿಂದ ಗೆದ್ದು ಬಂದ ಅಕ್ಕನಿಗೆ ನೃತ್ಯದ ಮೂಲಕ ಸ್ವಾಗತಿಸಿದ ಸಹೋದರಿ- ನೆಟ್ಟಿಗರು ಫೀದಾ

0
568

ಸನ್ಮಾರ್ಗ ವಾರ್ತೆ

ಕೊರೋನವೈರಸ್ ಅನ್ನು ಸೋಲಿಸಿದ ನಂತರ ಸಹೋದರಿಯು ಸುರಕ್ಷಿತವಾಗಿ ಮನೆಗೆ ಮರಳಿದಾಗ ಸಹೋದರಿಯೊಬ್ಬಳ ಅವಳನ್ನು ಮರಳಿ ಸ್ವಾಗತಿಸಲು ಸಂತೋಷದಿಂದ ನೃತ್ಯ ಮಾಡಿದ್ದು ಇದೀಗ ವೈರಲ್ ಆಗಿದೆ.

ಕೊರೋನವೈರಸ್‌ನಿಂದ ಯಶಸ್ವಿಯಾಗಿ ಚೇತರಿಸಿಕೊಂಡ ನಂತರ ಯುವತಿಯೊಬ್ಬಳು ತನ್ನ ಅಕ್ಕನನ್ನು ಮನೆಗೆ ಸ್ವಾಗತಿಸುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ಭಾನುವಾರ ವಿಡಿಯೋವನ್ನು ಟ್ವಿಟರ್‌ ಹ್ಯಾಂಡಲ್‌ನಲ್ಲಿ ಐಪಿಎಸ್ ಅಧಿಕಾರಿ ದೀಪಾಂಶು ಕಬ್ರಾರವರು “ಸಹೋದರಿಯರ ಡುಏಟ್” ಎಂದು ಬರೆದುಕೊಂಡಿದ್ದು “ಯಾವುದೇ ಮಹಾಮಾರಿಗೂ ಕೂಡ ಕುಟುಂಬದವರ ಒಂದಿಂಚು ನಗು ಮತ್ತು ಸಂತೋಷವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ” ಎಂದಿದ್ದು ಸಾವಿರಾರು ಜನರು ಈ ಭಾವನೆಗೆ ತಲೆದೂಗಿದ್ದಾರೆ.