ಭೀಮ ಕೊರೆಗಾಂವ್: ವರವರ ರಾವ್ ಭೇಟಿಗೆ ಅನುಮತಿ ಕೋರಿ ಕೋರ್ಟಿನ ಮೊರೆ ಹೋದ ಸಂಬಂಧಿಕರು

0
439

ಸನ್ಮಾರ್ಗ ವಾರ್ತೆ

ಮುಂಬೈ,ಜು.21: ಭೀಮ ಕೊರೆಗಾಂವ್ ಪ್ರಕರಣದ ಆರೋಪದಲ್ಲಿ ಬಂಧನದಲ್ಲಿರುವ ತೆಲುಗು ಕವಿ ವರವರ ರಾವ್‍ರ ಭೇಟಿಗೆ ಅನುಮತಿ ಕೋರಿ ಸಂಬಂಧಿಕರು ಬಾಂಬೆ ಹೈಕೋರ್ಟಿನ ಮೊರೆ ಹೋಗಿದ್ದಾರೆ.

ಜೈಲಿನಲ್ಲಿ ಕೊರೋನಾದಿಂದಾಗಿ ರಾವ್ ಚಿಕಿತ್ಸೆಯಲ್ಲಿದ್ದಾರೆ. ಕೊರೋನ ಚಿಕಿತ್ಸೆಯ ವೇಳೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿರುವುದು ಕಂಡು ಬಂದಿದೆ. ನಂತರ ನಾನವತಿ ಆಸ್ಪತ್ರೆಗೆ ನಾಡಿರೋಗ ತಜ್ಞರ ಚಿಕಿತ್ಸೆ ನೀಡಲಾಗುತ್ತಿದೆ. ಸಂಪೂರ್ಣ ಬಳಲಿ ನಿಶ್ಶಕ್ತನಾಗಿ ಹೋಗಿರುವ ಅವರನ್ನು ನಿರ್ದಿಷ್ಟ ದೂರದಿಂದ ಅವರನ್ನು ನೋಡಲು ಸಂಬಂಧಿಕರು ಅನುಮತಿ ಕೇಳಿದ್ದಾರೆ.

ಇವರ ಅರ್ಜಿಯಲ್ಲಿ ಉತ್ತರ ಕೊಡುವಂತೆ ಮಹಾರಾಷ್ಟ್ರ ಸರಕಾರಕ್ಕೆ ಮತ್ತು ಐಎನ್‍ಎಗೆ ಕೋರ್ಟು ಆದೇಶಿಸಿದೆ.

ವರವರ ರಾವ್ ಜೊತೆ ಸಂಪರ್ಕದಲ್ಲಿದ್ದ ತಮ್ಮನ್ನು ಕೊರೋನ ಪರೀಕ್ಷೆಗೆ ಒಳಪಡಿಸಬೇಕೆಂದು ಪ್ರಕರಣದ ಸಹ ಆರೋಪಿ ಮಾನವಹಕ್ಕು ಕಾರ್ಯಕರ್ತ ವೆರ್ನಾನ್ ಗೋನ್ವಾಲೆಸ್, ದಲಿತ ಚಿಂತಕ ಡಾ.ಬಿ.ಆರ್.ಅಬೇಡ್ಕರ್‌ರ ಮರಿಮೊಮ್ಮಗಳ ಪತಿ ಡಾ.ಆನಂದ್ ತೇಲ್ತುಂಬೆ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ.

ಇದೇವೇಳೆ, ವರವರ ರಾಮ್ ಸಹಿತ ಭೀಮ ಕೊರೆಗಾಂವ್ ಪ್ರಕರಣದಲ್ಲಿ ವಿಚಾರಣೆ ಇಲ್ಲದೇ ಜೈಲಿಗೆ ಹಾಕಿದ ಮಾನವಹಕ್ಕು ಕಾರ್ಯಕರ್ತರನ್ನು ಕೂಡಲೇ ಬಿಡುಗಡೆಗೊಳಿಸಬೇಕೆಂದು ಲೋಕಾದ್ಯಂತದ ವಿಚಾರವಾದಿಗಳು ರಂಗಪ್ರವೇಶಿಸಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.