ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಜು.21: ರಾಜಸ್ಥಾನದ ಬಿಕ್ಕಟ್ಟಿನ ನಡುವೆ ಕಾಂಗ್ರೆಸ್ ಮತ್ತು ಜಮ್ಮು ಕಾಶ್ಮೀರದ ನ್ಯಾಶನ್ ಕಾನ್ಫೆರೆನ್ಸ್ ನಡುವೆ ಜಗಳ ಆರಂಭವಾಗಿದೆ.
ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲ ಸಹೋದರಿ ಸಾರಾ ಕಾಂಗ್ರೆಸ್ ಬಂಡುಕೋರ ಸಚಿನ್ ಪೈಲಟ್ ಪತ್ನಿಯಾಗಿದ್ದು, ಜಮ್ಮು-ಕಾಶ್ಮೀರ ವಿಭಜನೆಗೊಂಡ ಬಳಿಕ ಗೃಹ ಬಂಧನದಲ್ಲಾಗಿರುವ ಉಮರ್ ಮತ್ತು ತಂದೆ ಫಾರೂಕ್ ಅಬ್ದುಲ್ಲರ ಮೇಲೆ ಬಿಜೆಪಿ ಮೃದು ನೀತಿ ತೋರಲು ಕಾರಣ ಸಚಿನ್ ಪೈಲಟ್ ಬಿಜೆಪಿಗೆ ಹತ್ತಿರವಾಗುತ್ತಿದ್ದರಿಂದಾಗಿದೆ ಎಂದು ಛತ್ತಿಸ್ಗಡ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಆರೋಪಿಸಿದ್ದಾರೆ.
ಉಮರ್ ಈ ಆರೋಪವನ್ನು ನಿರಾಕರಿಸಿದ್ದು, ಕಾಂಗ್ರೆಸ್ ಮುಖ್ಯಮಂತ್ರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವೆ ಎಂದು ಘೋಷಿಸಿದ್ದಾರೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












