ಸನ್ಮಾರ್ಗ ವಾರ್ತೆ
ರಿಯಾದ್,ಜು.28: ಯಮನ್ ಯುದ್ಧವನ್ನು ಕೊನೆಗೊಳಿಸುವ ಆಶಯವನ್ನು ಮುಂದಿಟ್ಟು ಇರಾನಿನ ಮಾಜಿ ಅಧ್ಯಕ್ಷ ಮಹ್ಮೂದ್ ಅಹ್ಮದ್ ನಜಾದ್ ಸೌದಿಯ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ರಿಗೆ ಸಂದೇಶ ಕಳುಹಿಸಿದ್ದಾರೆ.
ಬಿಕ್ಕಟ್ಟು ಕೊನೆಗೊಳಿಸಲು ಶಾಂತಿ, ಸೌಹಾರ್ದ ಮರಳಿ ಬರುವಂತಾಗಲು ಎರಡೂ ವಿಭಾಗದವರು ಚರ್ಚೆ ನಡೆಸಬೇಕು ಮತ್ತು ಇದಕ್ಕೆ ಅಂತಾರಾಷ್ಟ್ರೀಯ ಮಟ್ಟದ ಪ್ರಸಿದ್ಧ ಹಲವು ವ್ಯಕ್ತಿಗಳನ್ನೊಳಗೊಂಡ ಒಂದು ಸಮಿತಿ ರಚಿಸಬೇಕೆಂದು ಅವರು ಸೂಚಿಸಿದ್ದಾರೆಂದು ಸೌದಿ ಅರೇಬಿಯಾದ ಮಾಧ್ಯಮ ಅಶ್ಶರ್ಕುಲ್ ಔಸತ್ ವರದಿ ಮಾಡಿದೆ.
“ಈ ಪ್ರದೇಶದ ಜನರು ಮತ್ತು ನಿಮ್ಮ ನಡುವಿನ ಮಾನವೀಯ ಸಮಾಜದ ಬೇಡಿಕೆಯಲ್ಲಿ ಕರುಣೆಯ ನಿಲುವು ತೋರಿಸಬೇಕು ಎಂದು ರಾಜಕುಮಾರ್ ಬಿನ್ ಸಲ್ಮಾನ್ರನ್ನು ಉದ್ದೇಶಿಸಿ ನಜಾದ್ ಈ ರೀತಿ ಹೇಳಿದ್ದಾರೆ.
ಅಲ್ಲದೇ, ನಿಮಗೆ ಯಾವಾಗಲೂ ಒಳಿತನ್ನು ಮಾಡುವ ವಿಶ್ವಾಸ ಇದೆಯೆಂದು ಅಹ್ಮದ್ ನಜಾದ್ ಹೇಳಿದರು.
ಜಾಗತಿಕ ಬಿಕ್ಕಟ್ಟಿನ ಸುದ್ದಿಗಳು ಇಲ್ಲಿಂದ ಅಲ್ಲಿಗೆ ಅಲ್ಲಿಂದ ಇಲ್ಲಿಗೆ ವಿಶೇಷವಾಗಿ ಯಮನ್ಗೆ ಸಂಬಂಧಿಸಿದಂತೆ ಅದು ಅತ್ಯಧಿಕ ಹಾನಿ ಮಾಡಿದೆ. ಮನುಷ್ಯ ಸಮುದಾಯದ ಒಬ್ಬ ಸದಸ್ಯ ಎಂಬ ನೆಲೆಯಲ್ಲಿ ತಾನು ಈ ಸಂದೇಶವನ್ನು ಕಳುಹಿಸಿದ್ದೇನೆ ಎಂದು ಅಹ್ಮದಿ ನಜಾದ್ ಹೇಳಿದ್ದಾರೆ.
ಈ ಯುದ್ಧ ಕೊನೆಗೊಳಿಸುವ ಹಾಗೂ ಶಾಂತಿ ಸೌಹಾರ್ದ, ಸಹಕಾರ ಮರಳಿ ತರುವ ಮಾನವೀಯ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ನಜಾದ್ ಪತ್ರದಲ್ಲಿ ನೆನಪಿಸಿದ್ದಾರೆ.
ಸಂದೇಶದ ಪ್ರತಿಯನ್ನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜನರಲ್ ಅಂಟಾನಿಯೊ ಗುಟರೆಸ್ರಿಗೂ ಕಳುಹಿಸಿ ಕೊಡಲಾಗಿದೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












