ಸನ್ಮಾರ್ಗ ವಾರ್ತೆ
ರಮಲ್ಲಾ,ಜು.28: ರಮಲ್ಲಾದ ಮಸೀದಿಯ ಮೇಲೆ ಇಸ್ರೇಲಿನ ಅಕ್ರಮ ವಲಸೆಗಾರರು ದಾಳಿ ಮಾಡಿ, ಹಾನಿಯುಂಟು ಮಾಡಿದ್ದಾರೆ.
ಮಸೀದಿಯ ಹೊರಗೆ ಹೀಬ್ರೂ ಭಾಷೆಯಲ್ಲಿ ಫೆಲೆಸ್ತೀನ್ ವಿರೋಧಿ ಘೋಷಣೆಯನ್ನು ಪೈಂಟಿನಲ್ಲಿ ಬರೆದಿದ್ದಾರೆ. ಮಸೀದಿಗೆ ಬೆಂಕಿ ಉಂಡೆಗಳನ್ನು ಎಸೆದಿದ್ದು, ಬೆಂಕಿ ಹಿಡಿದಿದ್ದರಿಂದ ಮಸೀದಿಗೆ ಹಾನಿ ಸಂಭವಿಸಿದೆ.
ರವಿವಾರ ಮಧ್ಯರಾತ್ರಿ ಎಲ್ಬಿರೋಹ್ ಮಸೀದಿಗೆ ದಾಳಿ ನಡೆಯಿತು ಎಂದು ಫೆಲೆಸ್ತೀನ್ ಧಾರ್ಮಿಕ ವಿಷಯಗಳ ಸಹ ಸಚಿವ ಹುಝ್ಝಂ ಅಬೂಅಲ್ ರುಬ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ರಮಲ್ಲಾದ ಗುಡ್ಡೆಯ ಮೇಲೆ ಇಸ್ರೇಲ್ ವಾಸಕೇಂದ್ರದ ಮುಂಭಾಗದಲ್ಲಿ ಮಸೀದಿ ಇದೆ. ಕಿಟಕಿಯಿಂದ ಬೆಂಕಿಯುಂಡೆಗಳನ್ನು ಎಸೆದಿದ್ದರಿಂದ ಶೌಚಾಲಯಕ್ಕೆ ಬೆಂಕಿ ಹಿಡಿದು ಹಾನಿ ಸಂಭವಿಸಿತು ಎಂದು ಸಚಿವರು ತಿಳಿಸಿದ್ದು, ಪ್ರಾರ್ಥನಾ ಹಾಲ್ನ ಕಾರ್ಪೆಟ್ಗೆ ಬೆಂಕಿಯುಂಡೆ ಬಿದ್ದಿದದ್ದರೆ ಇಡೀ ಮಸೀದಿ ಸುಟ್ಟು ಹೋಗುತ್ತಿತ್ತು ಎಂದು ಅವರು ತಿಳಿಸಿದರು.
ವಲಸೆಗರಿಹೆ ಅವಕಾಶ ಕೊಟ್ಟಿರುವ ಇಸ್ರೇಲ್ ಸರಕಾರವು ದಾಳಿಯ ಹೊಣೆಯನ್ನು ವಹಿಸಿಕೊಳ್ಳಬೇಕೆಂದು ಸಚಿವರು ಹೇಳಿದರು. ಘಟನೆಗೆ ಇಸ್ರೇಲ್ ಪೊಲೀಸರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿದು ಬಂದಿದೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












