ಸನ್ಮಾರ್ಗ ವಾರ್ತೆ
ಕುವೈಟ್ಸಿಟಿ, ಆ.: ಬಾಂಗ್ಲಾದೇಶ, ಶ್ರೀಲಂಕಾ, ಪಾಕಿಸ್ತಾನ, ಫಿಲಿಪ್ಫೀನ್ಸ್, ಇರಾನ್ ನೇಪಾಳದವರಿಗೆ ನೇರವಾಗಿ ಕುವೈಟ್ ಪ್ರವೇಶಿಸದಂತೆ ನಿಷೇಧ ಹೇರಲಾಗಿದ್ದು ಬೇರೆ ದೇಶಗಳಲ್ಲಿ ಹದಿನಾಲ್ಕು ದಿವಸಗಳ ಕಾಲ ಇದ್ದು ಕುವೈಟ್ಗೆ ಬರಲು ಅವಕಾಶ ನೀಡಲಾಗಿದೆ.
ಕೊರೊನ ತೀವ್ರಗೊಂಡ ಹಿನ್ನೆಲೆಯಲ್ಲಿ ಭಾರತ ಸಹಿತ ಏಳು ದೇಶದವರನ್ನು ಕುವೈಟ್ ನಿರ್ಬಂಧಿಸಿದೆ. ಇದು ತಾತ್ಕಾಲಿಕ ಪ್ರಕ್ರಿಯೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಗಸ್ಟ್ ಒಂದರಿಂದ ಕುವೈಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಮರ್ಶಿಯಲ್ ವಿಮಾನ ಸರ್ವಿಸ್ ಆರಂಭವಾಗುವಾಗ ಈ ದೇಶಗಳ ಜನರನ್ನು ಬಿಟ್ಟು ಮಿಕ್ಕ ದೇಶಗಳದವರನ್ನು ಕುವೈಟ್ಗೆ ಬರಲು ಸಚಿವ ಸಂಪುಟ ಅನುಮತಿ ನೀಡಿದೆ ಎಂದು ಸರಕಾರದ ಸಂಪರ್ಕ ಕೇಂದ್ರ ತಿಳಿಸಿದೆ. ಕುವೈಟ್ ವಿಮಾನ ಯಾನ ಇಲಾಖೆ ಕೂಡ ಇದನ್ನು ದೃಢೀಕರಿಸಿದೆ.
ಈ ನಿರ್ಧಾರ ಊರಿಗೆ ಹೋಗಿ ಸಿಕ್ಕಿಬಿದ್ದಿರುವ ಸಾವಿರಾರು ಮಂದಿಗೆ ಹಿನ್ನಡೆಯಾಗಿ ಪರಿಣಮಿಸಿದ್ದು ಇವರೆಲ್ಲ ಆಗಸ್ಟನಲ್ಲಿ ವಿಮಾನ ಯಾನ ಆರಂಭವಾಗುವ ನಿರೀಕ್ಷೆಯಲ್ಲಿ ಕಾಯುತ್ತಿದ್ದರು. ಕಳೆದ ನಾಲ್ಕೂವರೆ ತಿಂಗಳಿಂದ ಇವರೆಲ್ಲ ಊರಿನಲ್ಲಿಯೇ ಸಿಕ್ಕಿಬಿದ್ದಿದ್ದಾರೆ. ಇವರಲ್ಲಿ ಕೆಲವರ ಕುಟುಂಬ ಕುವೈಟಿನಲ್ಲಿವೆ. ಇನ್ನೂ ಕುವೈಟ್ಗೆ ಹೋಗಲು ಆಗದಿದ್ದರೆ ಕೆಲಸ ಹೋಗುವ ಭಯದಲ್ಲಿ ಕೆಲವರಿದ್ದಾರೆ. ವಿಮಾನ ಆರಂಭವಾಗಲಿದೆ, ಕುವೈಟ್ ವಾಯುಯಾನ ಸಚಿವಾಲಯದೊಂದಿಗೆ ಚರ್ಚೆ ನಡೆಸಲಾಗಿದೆ ಎಂದು ಕೇಂದ್ರ ವಾಯುಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಟ್ವೀಟ್ ಮಾಡಿದ್ದರು. ಈಗ ನೋಡುವಾಗ ಭಾರತೀಯರ ಸಹಿತ ಹಲವು ದೇಶಗಳವರ ಮಂದೆ ವಿಮಾನ ಪ್ರಯಾಣದ ಕಗ್ಗಂಟು ಎದುರಾಗಿದೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












