ಸನ್ಮಾರ್ಗ ವಾರ್ತೆ
ಕೇರಳ, ಆ. 2: ಬಾಡಿಗೆ ಮನೆಯಲ್ಲಿ ವಾಸವಿದ್ದ ವೃದ್ಧೆಯೊಬ್ಬರ ಮೃತದೇಹ ಸಂಸ್ಕಾರಕ್ಕೆ ಸ್ವಂತ ಸ್ಥಳವನ್ನು ಸ್ಟುಡಿಯೊ ಮಾಲಕ ನೀಡಿ ಮಾನವೀಯತೆ ಮೆರೆದಿದ್ದಾರೆ. ಕಯ್ಪಮಂಗಲಂ ಮೂನ್ನು ಪೀಡಿಗ ಎಂಬಲ್ಲಿ ಸ್ಟುಡಿಯೊ ಹೊಂದಿರುವ ಸತ್ಯನ್ ಎಂಬವರು ನೆರೆಮನೆಯವರ ಬಗ್ಗೆ ಕರುಣೆ ತೋರಿಸಿದ್ದಾರೆ.
ಹಲವು ತಿಂಗಳಿನಿಂದ ಮೃತ ಮಹಿಳೆ ರೋಗದಿಂದ ಮಲಗಿದ್ದಲ್ಲೇ ಆಗಿದ್ದರು. ಗುರುವಾರ ಬೆಳಗ್ಗೆ ಇವರು ಮೃತಪಟ್ಟಿದ್ದು ಕೊರೊನ ಪರೀಕ್ಷೆ ಮಾಡಿ ಶವಸಂಸ್ಕಾರಕ್ಕೆ ಸಾರ್ವಜನಿಕ ಶ್ಮಶಾನಕ್ಕೆ ತರಲಾಗುವುದು ಎಂದು ಮನೆಯವರಿಗೆ ಆರೋಗ್ಯ ಕಾರ್ಯಕರ್ತರು ತಿಳಿಸಿದ್ದರು. ಇರೀಂಗಲಕ್ಕೂಡ್ ಮುನ್ಸಿಪಾಲಿಟಿಯಿಂದ ಅನುಮತಿ ಪತ್ರ ಬೇಕಿತ್ತು. ಆದರೆ ಇದು ಕಂಟೈನ್ಮೆಂಟ್ ಝೋನ್ ಆಗಿದ್ದರಿಂದ ಅನುಮತಿ ಪತ್ರ ಪಡೆಯಲು ಸಾಧ್ಯವಾಗಿರಲಿಲ್ಲ. ತೃಶೂರಿಗೆ ಹೋಗಿ ಅನುಮತಿ ಪಡೆದು ಬರಬೇಕಿತ್ತು.
ಆದರೆ ಬಡವರಾದ್ದರಿಂದ ಇದು ಕಷ್ಟ ಎಂದು ಅರಿತ ಸತ್ಯನ್ ಮೃತದೇಹ ಚಿತೆಗಿಡಲು ತನ್ನ ಜಮೀನಿನಲ್ಲಿ ಅವಕಾಶ ನೀಡಿದ್ದಾರೆ. ಅಧಿಕಾರಿಗಳು ಅನುಮತಿಯನ್ನು ಕೂಡ ನೀಡಿದರು.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












