ಕೊರೋನ ವ್ಯಾಕ್ಸಿನ್: ಸೌದಿ ಅರೇಬಿಯದಿಂದಲೂ ಕ್ಲಿನಿಕಲ್ ಪರೀಕ್ಷೆ

0
551

ಸನ್ಮಾರ್ಗ ವಾರ್ತೆ

ಜಿದ್ದ,ಆ.11: ಕೊರೋನ ವ್ಯಾಕ್ಸಿನ್ ಕಂಡು ಹುಡುಕಲು ಕ್ಲಿನಿಕಲ್ ಪರೀಕ್ಷೆ ಆರಂಭಿಸುವುದಾಗಿ ಸೌದಿ ಅರೇಬಿಯಾ ಆರೋಗ್ಯ ಸಚಿವಾಲಯ ತಿಳಿಸಿದೆ.

ಇದಕ್ಕೆ ಸಂಬಂಧಿಸಿದ ಪ್ರಕ್ರಿಯೆ ಪ್ರಗತಿಯಲ್ಲಿದೆ. ಚೀನದೊಂದಿಗೆ ಸಹಕರಿಸಿ ವ್ಯಾಕ್ಸಿನ್ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಕೊರೋನ ವ್ಯಾಕ್ಸಿನ್ ಪರೀಕ್ಷೆಯ ಮೂರನೇ ಹಂತದ ಟ್ರಯಲ್ ನಡೆಸಲು ಅಗತ್ಯವಾದ ಕ್ರಮವನ್ನು ಆವಿಷ್ಕರಿಸಲಾಗುತ್ತಿದೆ. ಚೈನೀಸ್ ಕಂಪೆನಿ ಕಾನ್ಸಿನೊವಾದೊಂದಿಗೆ ಸಹಕರಿಸಿ ವೈರಸ್ ವಿರುದ್ಧ ವ್ಯಾಕ್ಸಿನ್ ಅಭಿವೃದ್ಧಿ ಪಡಿಸಲು ಸಾಧ್ಯವಾಗಿದ್ದು, ಪ್ರಥಮ ಮತ್ತು ದ್ವಿತೀಯ ಹಂತದ ಪರೀಕ್ಷೆಯನ್ನು ಚೀನಾದಲ್ಲಿ ಮಾಡಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಮಾರ್ಚ್ 16ರಿಂದ 27ರವರೆಗೆ ಮೊದಲ ಹಂತದ ಅಧ್ಯಯನ ಪರೀಕ್ಷೆ ಚೀನದಲ್ಲಿ 108 ಸ್ವಯಂ ಸೇವಕರಿಗೆ ಲೋ, ಮೀಡಿಯಂ, ಹೈಡೋಸ್‍ಗಳನ್ನು ನೀಡಲಾಯಿತು. ಎರಡನೇ ಹಂತದಲ್ಲಿ ಎಪ್ರಿಲ್ ಹನ್ನೊಂದರಿಂದ 16ರವರೆಗೆ ಪರೀಕ್ಷೆ ನಡೆಯಿತು.

63 ಮಂದಿಗೆ ಲೋ, ಮೀಡಿಯಂ ಡೋಸ್‍ಗಳನ್ನು ನೀಡಲಾಯಿತು. ಈ ಎರಡು ಹಂತದಲ್ಲಿಯೂ ಸ್ವಯಂಸೇವಕರ ಪ್ಲಾಸ್ಮಾದಲ್ಲಿ ವ್ಯಾಕ್ಸಿನ್ ಉತ್ತಮ ಪ್ರತಿಕ್ರಿಯೆಯನ್ನೂ ರೋಗ ಪ್ರತಿರೋಧಕವನ್ನು ತೋರಿಸಿದೆ.

ಪಾಶ್ವಪರಿಣಾಮಗಳು ಕಡಿಮೆ ಇದ್ದು, ಎರಡು ಪರೀಕ್ಷೆಯ ಫಲಿತಾಂಶವನ್ನು ಲಾನ್ಸೆಟ್ ಸೈ‌ಂಟಿಫಿಕ್ ಜರ್ನಲ್‍ನಲ್ಲಿ ಪ್ರಕಟಿಸಲಾಗಿದೆ.

ಮೂರನೆ ಹಂತದ ಪರೀಕ್ಷೆ ಶೀಘ್ರ ಆರಂಭವಾಗಲಿದೆ. ಮೂರನೆ ಘಟ್ಟದಲ್ಲಿ ವಿವಿಧ ದೇಶಗಳ ಆರೋಗ್ಯ ಕೇಂದ್ರಗಳಲ್ಲಿ ನಡೆಯುವ ಕ್ಲಿನಿಕಲ್ ಅಧ್ಯಯನವಾಗಿದೆ. ಇದಕ್ಕಾಗಿ ಹೇರಳ ಜನರು ಪರೀಕ್ಷೆ ಮಾಡಿಕೊಳ್ಳಲಿದ್ದಾರೆ.

ಸೌದಿಯಲ್ಲಿ 5000 ಮಂದಿಯನ್ನು ಗುರಿಯಾಗಿರಿಸಲಾಗಿದೆ. ಅವರು 18 ವರ್ಷದಿಂದ ಮೇಲ್ಪಟ್ಟ ವಯೋಮಾನದವರು. ಎರಡು ಗುಂಪುಗಳನ್ನಾಗಿ ಮಾಡಿ ವ್ಯಾಕ್ಸಿನ್ ನೀಡಲಾಗುವುದು. ಪಾಶ್ವ ಪರಿಣಾಮ ಇದೇಯೋ ಎಂದು ನೋಡಲು ಸಂಶೋಧಕ ತಂಡ ಅವರನ್ನು ನಿರೀಕ್ಷಿಸಲಿವೆ.

 

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.