ಕೆಲಸ, ಕಲಿಕೆಯ ಅರ್ಹತೆಯಾಗಿ ಕನ್ನಡ ಭಾಷಾ ಪರೀಕ್ಷೆ

0
601

ಸನ್ಮಾರ್ಗ ವಾರ್ತೆ

ಬೆಂಗಳೂರು, ಆ.11: ಕರ್ನಾಟಕದಲ್ಲಿ ಕೆಲಸ ಮತ್ತು ಕಲಿಕೆಯ ಅರ್ಹತೆಯಾಗಿ ಕನ್ನಡ ಭಾಷೆ ಪರೀಕ್ಷೆ ನಡೆಸುವ ವಿಷಯವು ಸರಕಾರದ ಪರಿಗಣನೆಯಲ್ಲಿದೆ. ಈ ವಿಷಯದಲ್ಲಿ ಮೂರು ತಿಂಗಳೊಳಗೆ ಅಂತಿಮ ತೀರ್ಮಾನವನ್ನು ಕೈಗೊಳ್ಳಲಾಗುವುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ (ಕೆಡಿಎ) ಅಧ್ಯಕ್ಷ ಟಿ.ಎಸ್ ನಾಗಾಭರಣ ತಿಳಿಸಿದ್ದಾರೆ.

ಪರೀಕ್ಷೆಯನ್ನು ಮಾತ್ರ ಅರ್ಹತೆಯ ಮಾನದಂಡವಾಗಿ ಪರಿಗಣಿಸುವುದಿಲ್ಲ. ಆದ್ದರಿಂದ ಪರೀಕ್ಷೆ ಕಡ್ಡಾಯಗೊಳಿಸುವುದಿಲ್ಲ ಇತರ ಭಾಷೆಗಳ ಮಹತ್ವ ಕಡಿಮೆಗೊಳಿಸಲು ಬಯಸಿಲ್ಲ ಎಂದು ಅವರು ಹೇಳಿದರು.

ಈ ಕುರಿತು ಪ್ರಾಥಮಿಕ ಚರ್ಚೆ ಮಾತ್ರ ನಡೆದಿದ್ದು, ಪರೀಕ್ಷೆ ಹೇಗೆ ನಡೆಸಬೇಕೆಂದು ಅಂತಿಮ ತೀರ್ಮಾನವಾಗಿಲ್ಲ. ಏಳನೇ ಕ್ಲಾಸಿಗೋ ಹತ್ತನೇ ಕ್ಲಾಸಿಗೋ ಸಮಾನವಾಗಿ ಕನ್ನಡ ಭಾಷಾ ಪ್ರವೀಣ ಪರೀಕ್ಷೆ ನಡೆಸಲು ಆಲೋಚಿಸಲಾಗಿದೆ.

ಪರೀಕ್ಷೆ ಎಲ್ಲರಿಗೂ ಕಡ್ಡಾಯಗೊಳಿಸುವುದಿಲ್ಲ ಎಂದು ಹೇಳಲಾಗುತ್ತಿದ್ದರೂ ಕೆಲಸಕ್ಕಾಗಿ ಕರ್ನಾಟಕಕ್ಕೆ ಬರುವವರಿಗೆ ಇದು ಅಡಚಣೆಯಾಗಬಹುದೇ ಎಂಬ ಸಂದೇಹ ಸೃಷ್ಟಿಯಾಗಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.