ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಸೆ.30: ಹತ್ರಸ್ ಅತ್ಯಾಚಾರ ಕೊಲೆ ಪ್ರಕರಣದ ಕುರಿತು ಕೇಂದ್ರ ಸಚಿವೆ ಸ್ಮೃತಿ ಇರಾನಿಯವರ ಮೌನವನ್ನು ಕಾಂಗ್ರೆಸ್ ಪ್ರಶ್ನಿಸಿದೆ. ನಿರ್ಭಯ ಪ್ರಕರಣ ನಡೆದಿದ್ದಾಗ ಸ್ಮೃತಿ ಇರಾನಿ ಕಾಂಗ್ರೆಸ್ ಸರಕಾರವನ್ನು ಕಟುವಾಗಿ ಟೀಕಿಸಿ ಹೇಳಿಕೆ ನೀಡಿದ್ದರು. ಈ ವೀಡಿಯೊವನ್ನು ಯುವ ಕಾಂಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿವಿ ಶ್ರೀನಿವಾಸ್ ಪೋಸ್ಟ್ ಮಾಡಿ ಮೇಡಂಗೆ ಈಗ ರಕ್ತ ಕುದಿಯುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
Smriti Irani on rapes in 2012: 😡😡😡
Smriti Irani on rapes in 2020: 🤫🤫🤫
It's a disgrace that she is India's Women and Child Development Minister.pic.twitter.com/Rz2gJKgFpm
— Srivatsa (@srivatsayb) September 30, 2020
ಸ್ಮೃತಿ ಇರಾನಿ ಭಾರತದ ಮಹಿಳಾ, ಮಕ್ಕಳ ಕಲ್ಯಾಣ ಸಚಿವೆಯಾಗಿ ಮುಂದುವರಿಯುವುದು ನಾಚಿಕೆಗೇಡು ಎಂದು ಯುವ ಕಾಂಗ್ರೆಸ್ ನ್ಯಾಶನಲ್ ಕ್ಯಾಂಪೈನ್ ಹೊಣೆಯನ್ನು ಹೊತ್ತಿರುವ ಶ್ರೀವಾಸ್ತವ ಹೇಳಿದ್ದಾರೆ. ಉತ್ತರ ಪ್ರದೇಶದ ಹತ್ರಸ್‍ನಲ್ಲಿ ಸವರ್ಣೀಯರು ಕ್ರೂರ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ದಲಿತ ಯುವತಿಯ ಮೃತದೇಹವನ್ನು ಬಲವಂತದಿಂದ ಸಂಸ್ಕರಿಸಿದ್ದರ ವಿರುದ್ಧ ಪ್ರಿಯಾಂಕಾ ಗಾಂಧಿ ರಂಗಪ್ರವೇಶಿಸಿದ್ದು ಉತ್ತರ ಪ್ರದೇಶ ಸರಕಾರದ ಆಡಳಿತದಲ್ಲಿ ನ್ಯಾಯವಿಲ್ಲ. ಅನ್ಯಾಯದ ಆಧಿಪತ್ಯವಿದೆ. ಯೋಗಿ ಆದಿತ್ಯನಾಥ್ ರಾಜೀನಾಮೆ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.
ರಾತ್ರೆ 12 ಗಂಟೆಗೆ ಬಾಲಕಿಯ ಕುಟುಂಬ ಕಾಯುತ್ತಿತ್ತು. ಆದರೆ, ಸಂತ್ರಸ್ತೆಯ ಮೃತದೇಹವನ್ನು ಕುಟುಂಬದ ಪ್ರತಿಭಟನೆಯನ್ನು ಲೆಕ್ಕಿಸದೆ ಉತ್ತರ ಪ್ರದೇಶ ಸರಕಾರ ಸಂಸ್ಕರಿಸಿತು. ಜೀವವಿರುವಾಗ ಬಾಲಕಿಯನ್ನು ರಕ್ಷಿಸಲು ಸರಕಾರ ಏನೂ ಮಾಡಲಿಲ್ಲ. ಚಿಕಿತ್ಸೆ ನೀಡಲೂ ವಿಳಂಬಿಸಿತು. ಈಗ ಸಾವಿನ ಬಳಿಕವೂ ಅಪಮಾನಿಸಿದೆ. ನೀವು ಕ್ರೈಂ ನಿಲ್ಲಿಸುವುದಿಲ್ಲ ಎಂಬುದು ಮಾತ್ರವಲ್ಲ ಕ್ರಿಮಿನಲ್‍ಗಳಂತೆ ವರ್ತಿಸುತ್ತಿದ್ದೀರಿ. ಯೋಗಿ ಆದಿತ್ಯನಾಥ್ ರಾಜೀನಾಮೆ ನೀಡಬೇಕು. ಆಡಳಿತದಲ್ಲಿ ನ್ಯಾಯವೂ ಇಲ್ಲ. ಅನ್ಯಾಯ ತುಂಬಿಕೊಂಡಿದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.












