ದೇಶದಲ್ಲಿ ಪ್ರತಿದಿನ 87 ಅತ್ಯಾಚಾರ ಪ್ರಕರಣಗಳು ವರದಿ: ಬೆಚ್ಚಿ ಬೀಳಿಸುವ ಮಾಹಿತಿ

0
512

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಸೆ.30: ದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳ ಲೆಕ್ಕ ಬೆಚ್ಚಿ ಬೀಳಿಸುವಂತಿದೆ. ನ್ಯಾಶನಲ್ ಕ್ರೈಂ ರೆಕಾರ್ಡ್ ಬ್ಯೂರೊದ ಲೆಕ್ಕ ಪ್ರಕಾರ 2019ರಲ್ಲಿ ಪ್ರತಿ ದಿನಾಲೂ 87 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ಮಹಿಳೆಯರ ವಿರುದ್ಧ ದೌರ್ಜನ್ಯದ 4,05,861 ಪ್ರಕರಣಗಳು ವರದಿಯಾಗಿವೆ. ಮಹಿಳೆಯರ ಮೇಲಿನ ದೌರ್ಜನ್ಯದಲ್ಲಿ ಶೇ.7.3 ಹೆಚ್ಚಳ ಕಳೆದ ವರ್ಷ ದಾಖಲುಗೊಂಡಿದೆ. 2018ರಲ್ಲಿ ಒಟ್ಟು 3,78,236 ಪ್ರಕರಣಗಳಾಗಿದ್ದವು.

2018ರಲ್ಲಿ 33,356 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. 2017ರಲ್ಲಿ 32,559 ಪ್ರಕರಣಗಳು ನಡೆದಿದ್ದವು. ಮಕ್ಕಳ ವಿರುದ್ಧ ದೌರ್ಜನ್ಯದಲ್ಲಿಯೂ ಶೇ4.5 ಹೆಚ್ಚಳವಾಗಿದೆ. 2019ರಲ್ಲಿ ಮಕ್ಕಳ ವಿರುದ್ಧ ದೌರ್ಜನ್ಯದ 1.48 ಲಕ್ಷ ಪ್ರಕರಣಗಳು ದಾಖಲುಗೊಂಡಿವೆ.