ಸನ್ಮಾರ್ಗ ವಾರ್ತೆ
ಪಾಲ್ಘರ್,ಅ.10: ಮಹಾರಾಷ್ಟ್ರದ ಪಾಲ್ಘರ್ನಲ್ಲಿ ಹನ್ನೆರಡು ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿದ ಕಾಂಟ್ರಾಕ್ಟರ್ನನ್ನು ಪೊಲೀಸರು ಬಂಧಿಸಿದ್ದಾರೆ. ಪಲ್ಗಾರ್ ಜಿಲ್ಲೆಯ ಮೊಖಾದ ಪ್ರದೇಶದಲ್ಲಿ ದಾರುಣ ಘಟನೆ ನಡೆದಿದೆ. ಬುಧವಾರ ತಾವಿಯ ಚಿವಾಡಿಯ ಮನೆಗೆ ಬಂದ 30 ವರ್ಷದ ಆರೋಪಿ ದಿಯಾರಾಮ್ ದೋಯ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಘಟನೆ ನಡೆದ ವೇಳೆ ಬಾಲಕಿ ಒಬ್ಬಳೇ ಇದ್ದಳು.
ಮನೆಗೆ ಬಂದ ಬಾಲಕಿಯ ಸಹೋದರಗೆ ಬಾಲಕಿ ಅತ್ಯಾಚಾರಕ್ಕೊಳಾದುದು ಗೊತ್ತಾಗಿದ್ದು ಬೊಬ್ಬೆ ಹೊಡೆದಿದ್ದಾನೆ . ಸ್ಥಳೀಯರು ಸೇರುವ ಮೊದಲೇ ದಿಯೊರಾಮ್ ಅಲ್ಲಿಂದ ತಪ್ಪಿಸಿಕೊಂಡಿದ್ದನು. ನಂತರ ಕುಟುಂಬ ಸದಸ್ಯರು ನೀಡಿದ ದೂರಿನಾಧಾರದಲ್ಲಿ ದಿಯೊರಾಮ್ನನ್ನು ಮೊಖಾದ ಪೊಲೀಸರು ಬಂಧಿಸಿದರು. ಆರೋಪಿಯ ವಿರುದ್ಧ ಪೊಕ್ಸೊ ಕಾನೂನಡಿಯಲ್ಲಿ ಪ್ರಕರಣ ದಾಖಲಾಗಿದೆ. ಕೋರ್ಟಿಗೆ ಹಾಜರಾಗಿರುವ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಬಿಟ್ಟುಕೊಡಲಾಗಿದೆ.