ಅಮೆರಿಕದಿಂದ ಯುಎಇಗೆ ಎಫ್-35 ಯುದ್ಧವಿಮಾನ ಮಾರಾಟ

0
393

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್,ಅ.30: ಇಸ್ರೇಲಿನೊಂದಿಗೆ ರಾಜತಾಂತ್ರಿಕ ಸಂಬಂಧ ಸ್ಥಾಪಿಸಿದ್ದರಿಂದ ಅಮೆರಿಕ ಎಫ್35 ಯುದ್ಧ ವಿಮಾನಗಳನ್ನು ಯುಎಇಗೆ ಮಾರಲು ತೀರ್ಮಾನಿಸಿದೆ. ವೈಟ್ ಹೌಸ್‍ನ ತೀರ್ಮಾನವನ್ನು ಅಮೆರಿಕ ಕಾಂಗ್ರೆಸ್ ಸದಸ್ಯೆ ಎಲಿಯಟ್ ಏಂಗಲ್ ಹೇಳಿದ್ದಾರೆ. ಮಾರಾಟದ ಕುರಿತು ಡೊನಾಲ್ಡ್ ಟ್ರಂಪ್ ಸರಕಾರ ಅನಧಿಕೃತವಾಗಿ ಅಮೆರಿಕನ್ ಕಾಂಗ್ರೆಸ್‍ಗೆ ತಿಳಿಸಿದೆ.

ಯುದ್ಧ ವಿಮಾನ ಮಾರಾಟ ಗಲ್ಫ್ ಕ್ಷೇತ್ರದ ಸೈನಿಕ ಸಮತೋಲನದಲ್ಲಿ ಗಣನೀಯ ಬದಲಾವಣೆ ಮಾಡಲಿದೆ. ಇಸ್ರೇಲಿನ ಸೈನಿಕ ಕ್ಷೇತ್ರಕ್ಕೆ ಬಾಧಕವಾಗಲಿದೆ ಎಂದು ಪಾರ್ಲಿಮೆಂಟ್ ವಿದೇಶ ಸಮಿತಿಯ ಮುಂದಾಳು ಡೆಮಕ್ರಾಟಿಕ್ ಪ್ರತಿನಿಧಿ ಎಲಿಯಟ್ ಹೇಳಿದರು.

ಲಾಕ್ ಹೀಡ್ ಮಾರ್ಟಿನ್ ನಿರ್ಮಿತ ಐವತ್ತು ಎಫ್ 35 ಯುದ್ಧ ವಿಮಾನಗಳನ್ನು ಯುಎಇಗೆ ಮಾರಲು ಬಯಸಿದ್ದಾಗಿ ವೈಟ್ ಹೌಸ್ ತಿಳಿಸಿದೆ ಎಂಬುದಾಗಿ ರಾಯಿಟರ್ಸ್ ಸುದ್ದಿ ಸಂಸ್ಥೆ ಕೂಡ ವರದಿ ಮಾಡಿದೆ.