ಜಾರ್ಖಂಡ್ ಬಿಜೆಪಿ ಮುಖ್ಯಸ್ಥರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು

0
574

ಸನ್ಮಾರ್ಗ ವಾರ್ತೆ

ಜಾರ್ಖಂಡ್: ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸಿದ ಆರೋಪದ ಮೇಲೆ ಜಾರ್ಖಂಡ್ ಬಿಜೆಪಿ ಮುಖ್ಯಸ್ಥ ದೀಪಕ್ ಪ್ರಕಾಶ್ ವಿರುದ್ಧ ಶನಿವಾರ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದಿನ ಎರಡು-ಮೂರು ತಿಂಗಳಲ್ಲಿ ಬಿಜೆಪಿ ರಾಜ್ಯದಲ್ಲಿ ಸರ್ಕಾರ ರಚಿಸಲಿದೆ ಎಂದು ಪ್ರಕಾಶ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.

“ಹೇಮಂತ್ ಸೊರೇನ್ ಸರ್ಕಾರವು ಧೈರ್ಯವನ್ನು ಹೊಂದಿದ್ದರೆ, 24 ಗಂಟೆಗಳ ಒಳಗೆ ನನ್ನನ್ನು ಬಂಧಿಸಲಿ” ಎಂಬುದಾಗಿ ಪ್ರಕಾಶ್ ಹೇಳಿದ್ದರು.