ಟೈಮ್ ಮ್ಯಾಗಝಿನ್ ಕವರ್ ಪುಟದಲ್ಲಿ ಭಾರತೀಯ ಮೂಲದ ಬಾಲೆ: ಗೀತಾಂಜಲಿ ರಾವ್‌ಗೆ ‘ಕಿಡ್ ಆಪ್ ದಿ ಇಯರ್’ ಖ್ಯಾತಿ

0
553

ಸನ್ಮಾರ್ಗ ವಾರ್ತೆ

ನವದೆಹಲಿ: ಟೈಮ್ ಮ್ಯಾಗಝಿನ್ ಭಾರತೀಯ-ಅಮೇರಿಕನ್ ಗೀತಾಂಜಲಿ ರಾವ್ ಅವರನ್ನು ಮೊದಲ ‘ಕಿಡ್ ಆಫ್ ದಿ ಇಯರ್’ ಎಂದು ಹೆಸರಿಸಿದೆ. ಗೀತಾಂಜಲಿಗೆ ಕೇವಲ 15 ವಯಸ್ಸು. ಆದರೆ ವಿಜ್ಞಾನ ಸಂಬಂಧಿತ ಯಶಸ್ಸನ್ನು ಸಾಧಿಸಿದ್ದಾರೆ. ಟೈಮ್ ನಿಯತಕಾಲಿಕವು ಗೀತಾಂಜಲಿಯನ್ನು ವಿಜ್ಞಾನಿ ಮತ್ತು ಸಂಶೋಧಕಿ ಎಂದು ಕರೆದಿದೆ. ಮ್ಯಾಗಝಿನ್ ಈ ವಿಭಾಗದಲ್ಲಿ ಮೊದಲ ಬಾರಿಗೆ ಒಬ್ಬರನ್ನು ಆಯ್ಕೆ ಮಾಡಿರುವುದು ವಿಶೇಷವೂ ಹೌದು.

ಟೈಮ್ ಪ್ರಕಾರ, ಗೀತಾಂಜಲಿ ಕುಡಿಯುವ ನೀರಿನಲ್ಲಿ ಮಾಲಿನ್ಯವನ್ನು ಬೆರೆಸುವುದನ್ನು ತಡೆಯುವ, ಡ್ರಗ್ಸ್  ಚಟ ಹೋಗಲಾಡಿಸುವಿಕೆ ಮತ್ತು ಸೈಬರ್ ಬೆದರಿಕೆಯನ್ನು ನಿಯಂತ್ರಿಸುವಲ್ಲಿ ಕೆಲಸವನ್ನು ಮಾಡಿದ್ದಾರೆ. ಆದ್ದರಿಂದ ಮ್ಯಾಗಝಿನ್ ಅವರಿಗೆ ಕವರ್ ಪುಟದಲ್ಲಿ ಸ್ಥಾನವನ್ನು ನೀಡಿದೆ.  ಸಮಸ್ಯೆಗಳನ್ನು ನಿವಾರಿಸಲು ಗೀತಾಂಜಲಿ ಆ್ಯಪ್ ರಚಿಸಿದ್ದು ಕ್ರೋಮ್ ವಿಸ್ತರಣೆಯ ಮೂಲಕ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಿದ್ದಾರೆ ಎಂಬುದಾಗಿ ವರದಿಯಾಗಿದೆ.

ವರ್ಷದ ಮೊದಲ ಮಗುಗಾಗಿ ನಿಯತಕಾಲಿಕೆಯು 5,000
ಕ್ಕೂ ಹೆಚ್ಚು ನಾಮನಿರ್ದೇಶನಗಳನ್ನು ಪಡೆದಿತ್ತು. ಈ ಪೈಕಿ ಗೀತಾಂಜಲಿಯನ್ನು ಮಾತ್ರ ಆಯ್ಕೆ ಮಾಡಿದೆ. ಇದಕ್ಕೂ ಮೊದಲು ಟೈಮ್ ಸ್ಪೆಷಲ್‌ಗಾಗಿ ಗೀತಾಂಜಲಿಯವರ ಸಂದರ್ಶನವನ್ನು ನಟಿ ಮತ್ತು ಕಾರ್ಯಕರ್ತೆ ಏಂಜಲೀನಾ ಜೂಲಿ ತೆಗೆದುಕೊಂಡಿದ್ದಾರೆ.