ಸನ್ಮಾರ್ಗ ವಾರ್ತೆ
ತೆಲಂಗಾಣ,ಡಿ.4: ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಜಿಎಚ್ಎಂಸಿ ಚುನಾವಣೆಯಲ್ಲಿ ಈಗ ಟಿಆರ್ಎಸ್ ಮುನ್ನಡೆ ಸಾಧಿಸಿದ್ದು 57 ಸ್ಥಾನಗಳಲ್ಲಿ ಮುನ್ನಡೆದಿದೆ. ಎರಡನೇ ಸ್ಥಾನದಲ್ಲಿ 31 ಸ್ಥಾನಗಳ ಮುನ್ನಡೆಯಲ್ಲಿ ಎಐಎಂಐಎಂ ಇದೆ. ಮೂರನೇ ಸ್ಥಾನಕ್ಕೆ ಕುಸಿದ ಬಿಜೆಪಿ 22 ಸೀಟುಗಳಲ್ಲಿ ಮುನ್ನಡೆ ಸಾಧಿಸಿದೆ.
150 ವಾರ್ಡುಗಳಲ್ಲಿ ಚುನಾವಣೆ ನಡೆದಿದ್ದು ಬಿಜೆಪಿಯಿಂದ ಅಮಿತ್ ಶಾ ಮುಂತಾದವರು ಚುನಾವಣಾ ಪ್ರಚಾರಕ್ಕೆ ಬಂದಿದ್ದರು. 24 ವಿಧಾನಸಭಾ ಸೀಟುಗಳ ವ್ಯಾಪ್ತಿಯಲ್ಲಿ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಕಾರ್ಯಾಚರಿಸುತ್ತದೆ. 2016ರ ಚುನಾವಣೆಯಲ್ಲಿ 150 ವಾರ್ಡುಗಳಲ್ಲಿ 99 ಸ್ಥಾನವನ್ನು ಟಿಆರ್ಎಸ್ ಗಳಿಸಿತ್ತು. 26ನೇ ವಾರ್ಡಿನ 26 ಮತ್ತು 69 ಬೂತಿನಲ್ಲಿ ಬ್ಯಾಲೆಟ್ ಪೇಪರಿನಲ್ಲಿ ಮುದ್ರಣ ಪ್ರಮಾದ ಕಂಡು ಬಂದ್ದರಿಂದ ಮತದಾನ ರದ್ದುಪಡಿಸಲಾಗಿತ್ತು.
ಕೊರೋನ ಪ್ರತಿರೋಧ ಹಿನ್ನೆಲೆಯಲ್ಲಿ ಬ್ಯಾಲೆಟ್ ಪೇಪರ್ ಬಳಸಿ ಚುನಾವಣೆ ನಡೆದಿದೆ. ಆದುದರಿಂದ ಫಲಿತಾಂಶ ಬರಲು ತಡವಾಗಬಹುದು. ಸಂಜೆ ಅಥವಾ ರಾತ್ರೆಗಷ್ಟೇ ಫಲಿತಾಂಶ ಸ್ಪಷ್ಟವಾಗಲಿದೆ ಎಂದು ವರದಿ ತಿಳಿಸಿದೆ.












