ಸನ್ಮಾರ್ಗ ವಾರ್ತೆ
ಟೆಹ್ರಾನ್: ಇರಾನ್-ಅಫ್ಘಾನಿಸ್ತಾನದ ಮೊದಲ ರೈಲು ಮಾರ್ಗ ಉದ್ಘಾಟನೆಗೊಂಡಿದೆ. 140 ಕಿಲೊ ಮೀಟರ್ ಉದ್ದದ ಮಾರ್ಗ ಪೂರ್ವ ಇರಾನ್ನಿಂದ ಪಶ್ಚಿಮ ಅಫ್ಘಾನಿಸ್ತಾನವನ್ನು ಜೋಡಿಸುತ್ತಿದೆ.
85 ಕಿಲೋಮೀಟರ್ ರೈಲ್ವೆ ಮಾರ್ಗವನ್ನು ಅಭಿವೃದ್ಧಿ ಪಡಿಸಿ ಅಫ್ಘಾನಿನ ನಗರವಾದ ಹೆರಾತ್ನೊಂದಿಗೆ ಜೋಡಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಸಂಪೂರ್ಣ ನಿರ್ಮಾಣ ವೆಚ್ಚವನ್ನು ಇರಾನ್ ಭರಿಸಿದೆ.
ಪರ್ಷಿಯನ್ ಭಾಷೆ ಮಾತಾಡುವ ಎರಡು ದೇಶಗಳ ಸಂಬಂಧವನ್ನು ಬಲಪಡಿಸಲು ಈ ಮಾರ್ಗವನ್ನು ತೆರೆಯಲಾಗಿದೆ. ಮಾತ್ರವಲ್ಲ ಅಫ್ಘಾನಿಸ್ತಾನದಿಂದ ಇರಾನ್ ಮೂಲಕ ಕಾಮನ್ವೆಲ್ತ್ ದೇಶಗಳಾದ ಟರ್ಕಿ, ಯುರೋಪ್, ಪರ್ಷಿಯನ್ ಗಲ್ಫ್ ದೇಶಗಳಿಗೆ ಸರಕು ಸಾಗಾಟ ಸಾಧ್ಯವಾಗಲಿದೆ.












