ರೈತ ಪ್ರತಿಭಟನೆ: ಅಸಂಖ್ಯ ಸಂಘಟನೆಗಳು ಹೋರಾಟ ಸ್ಥಳಕ್ಕೆ

0
567

ರೈತರಿಗೆ ಉತ್ತಮವಾಗಿದ್ದ ಕಾನೂನನ್ನು ಮೋದಿಯವರು ಯಾಕೆ ಈಗ ತಿದ್ದುಪಡಿ ಮಾಡಿದರು- ಸುಖ್‍ವೀಂದರ್ ಸಿಂಗ್ ಸಬ್ರ ವ್ಯಂಗ್ಯ

 

ಸನ್ಮಾರ್ಗ ವಾರ್ತೆ

ಪಂಜಾಬ್ ಕಿಸಾನ್ ಮಝ್ದೂರ್ ಸಂಘರ್ಷ ಸಮಿತಿ ಪ್ರಧಾನ ಕಾರ್ಯದರ್ಶಿ ಸುಖ್‍ವೀಂದರ್ ಸಿಂಗ್ ಸಬ್ರ ಪಂಜಾಬಿನ ಫಿರೋಝಾ ಪುರಿಯಿಂದ 3500 ರೈತರನ್ನು ಸಿಂಘು ಹೋರಾಟ ಭೂಮಿಗೆ ಕರೆತಂದಿದ್ದಾರೆ. ಜಂಟಿ ಹೋರಾಟ ಸಮಿತಿಯ ಭಾಗವಲ್ಲದ ರೈತ ಸಂಘಟನೆಗಳು ಕೂಡ ರೈತ ಹೋರಾಟಕ್ಕೆ ಬಂದು ಸೇರಿಕೊಳ್ಳುತ್ತಿವೆ. ಗುರುದಾಸ್‍ಪುರ, ಕಪೂತ್ಲ, ಜಲಂಧರ್, ತರಣ್ ತಾರನ್, ಅಮೃತಸರ್‌ಗಳಿಂದ ಬಹಳಷ್ಟು ರೈತರು ಹೋರಾಟ ಸ್ಥಳಕ್ಕೆ ಬರುತ್ತಿದ್ದಾರೆಂದು ಸುಖ್‍ವೀಂದರ್ ಹೇಳಿದರು.

ರೈತರ ಸೀಝನ್ ಆಗಿದ್ದೂ ಅದನ್ನೆಲ್ಲ ಬಿಟ್ಟು ಹಲವರು ಬರುತ್ತಿದ್ದಾರೆ. ಈ ಕೃಷಿ ಸೀಝನ್ ನಷ್ಟವಾಗದೆ ಎಂದು ಕೇಳಿದಾಗ ಅದಾನಿ ಅಂಬಾನಿಯಿಂದ ನಮಗೆ ಕೃಷ್ಟಿಯನ್ನು ರಕ್ಷಿಸಬೇಕಾಗಿದೆ ಎಂದು ರೈತರು ಹೇಳಿದರು. ಜನರಿಗೆ ಆಹಾರಕ್ಕಾಗಿ ನಾವು ಕೃಷಿ ಮಾಡುವುದು ಸರಕಾರ ಅದನ್ನು ನಿಲ್ಲಿಸಿ ಅದಾನಿ ಅಂಬಾನಿಗೆ ಕೃಷಿ ಮಾಡಬೇಕೆಂದು ಹೇಳುತ್ತಿದೆ. ಮೋದಿ ಒಂದೇ ವಿಷಯವನ್ನು ನಿರಂತರ ಹೇಳುತ್ತಿದ್ದಾರೆ.

ಪಂಜಾಬಿನ ರೈತರು 2024ರವರೆಗೆ ಇಲ್ಲಿರುತ್ತಾರೆ. ಹೋರಾಟ 14 ದಿವಸ ಹಿಂದಿಕ್ಕಿದಾಗ ರೈತರಿಗೆ ಹೊಸ ಕಾನೂನಿಂದ ಪ್ರಯೋಜನ ಸಿಕ್ಕಿದೆಯೆಂದು ಹೇಳಿದದು ಸುಳ್ಳು ಆದ್ದರಿಂದ ಈಗ ತಿದ್ದುಪಡಿಯ ಮಾತು ಹೇಳುತ್ತಿರುವುದು. ರೈತರಿಗೆ ಉತ್ತಮವಾದ ಕಾನೂನನ್ನು ಯಾಕೆ ಈಗ ತಿದ್ದುಪಡಿ ಮಾಡುವುದು ಎಂದು ಸಬ್ರ ಮೋದಿಯನ್ನು ವ್ಯಂಗ್ಯವಾಡಿದರು.

3 ಕಾನೂನುಗಳನ್ನು ಹಿಂಪಡೆಯುವುದರ ಜೊತೆಗೆ ಹತ್ತು ವರ್ಷ ಆದ ಮೇಲಿನ ಟ್ರಾಕ್ಟರ್ ಚಲಾಯಿಸುವಂತಿಲ್ಲ ಎಂಬ ಕಾನೂನನ್ನೂ ಹಿಂಪಡೆಯಬೇಕೆಂದು ಪಂಜಾಬ್ ಕಿಸಾನ್ ಮಜ್ದೂರ್ ಸಂಘರ್ಷ್ ಸಮಿತಿ ಹೇಳುತ್ತಿದೆ. ಇತರ ಮೋಟಾರು ವಾಹನಗಳಂತೆ ಟ್ರಾಕ್ಟರಿಗೂ ನಿಷೇಧ ಹೇರಿದರೆ ಸಣ್ಣ ರೈತರಿಗೆ ಟ್ರಾಕ್ಟರ್ ಕನಸಾಗಿಯೇ ಉಳಿದೀತು. 20-40 ವರ್ಷ ಹಳೆಯ ಟ್ರಾಕ್ಟರ್ ಇರುವವರು ಪಂಜಾಬಿನ ರೈತರು. ಅದನ್ನೆಲ್ಲ ನಿಲ್ಲಿಸಬೇಕಾಗಿ ಬಂದರೆ ಕೃಷಿ ಮಾಡುವುದನ್ನು ನಿಲ್ಲಿಸಿ ಕೃಷಿ ಭೂಮಿಯನ್ನು ಕಾರ್ಪೊರೇಟ್‍ಗಳಿಗೆ ನೀಡಬೇಕಾಗಬಹುದು. ಪರಿಸರ ಮಲಿನೀಕರಣದ ಹೆಸರಿನಲ್ಲಿ 10 ವರ್ಷದ ವಾಹನಗಳನ್ನು ರಸ್ತೆಗೆ ಇಳಿಸಬಾರದೆಂದು ಆದೇಶ ಹೊರಡಿಸಿರುವುದು ಟ್ರಾಕ್ಟರ್‍ಗಳಿಗೂ ಅನ್ವಯಗೊಳಿಸಿದುದರ ವಿರುದ್ಧ 40 ವರ್ಷ ಹಳೆಯ ಟ್ರಾಕ್ಟರ್ ಓಡಿಸಿ ಬಂದ ರೈತನನ್ನು ಸಬ್ರ ಪರಿಚಯಿಸಿದರು. ಪಂಜಾಬಿನಿಂದ 550 ಕಿಲೋ ಮೀಟರ್ ಟ್ರಾಕ್ಟರ್ ಚಲಾಯಿಸಿ ಸಿಂಘು ಗಡಿಗೆ ರೈತ ಬಂದಿದ್ದಾರೆ. 40 ವರ್ಷವೂ ಅದನ್ನು ಸರಿಯಾಗಿ ನಿರ್ವಹಿಸಿದ್ದರಿಂದ ಇದು ಸಾಧ್ಯವಾಗಿದೆ ಎಂದು ಸಬ್ರ ಹೇಳಿದರು.