ಸಿರಿಯಾ: 48 ಗಂಟೆಗಳಲ್ಲಿ 40 ಶಸ್ತ್ರಕ್ರಿಯೆಗೆ ನೇತೃತ್ವ ನೀಡಿದ ಟರ್ಕಿಯ ವೈದ್ಯರ ತಂಡ

0
537

ಸನ್ಮಾರ್ಗ ವಾರ್ತೆ

ಡಮಾಸ್ಕಸ್: ಎರಡು ದಿನಗಳಲ್ಲಿ 40 ರೋಗಿಗಳಿಗೆ ಶಸ್ತ್ರಕ್ರಿಯೆ ಮಾಡಿ ಟರ್ಕಿಯ ವೈದ್ಯರ ತಂಡವೊಂದು ಇತಿಹಾಸ ನಿರ್ಮಿಸಿದ್ದಾರೆ.

ಉತ್ತರ ಸಿರಿಯಾದ ಯುಫ್ರಿಟಿಸ್ ನದಿ ತೀರದ ಅಲ್ ರಾಯ್ ಆಸ್ಪತ್ರೆಯಲ್ಲಿ ಟರ್ಕಿ ಮೂಲದ ವೈದ್ಯರ ತಂಡವೊಂದು ನಿರಂತರ 48 ಗಂಟೆಗಳ ಕಾಲ 40 ಶಸ್ತ್ರಕ್ರಿಯೆ ನಡೆಸಿದ್ದಾರೆ. ಇದರಲ್ಲಿ 21 ಮಕ್ಕಳೂ ಸೇರಿದ್ದಾರೆ ಎಂದು ತಿಳಿದು ಬಂದಿದೆ.

ಟರ್ಕಿ ಆರೋಗ್ಯ ಸಚಿವಾಲಯದ ಸಿರಿಯನ್ ಸಹಾಯ ಅಭಿಯಾನದ ಭಾಗವಾಗಿ ಸಿರಿಯಾಕ್ಕೆ ಕಳುಹಿಸಿದ ವೈದ್ಯರ ತಂಡ ಯಶಸ್ವಿಯಾಗಿ ಶಸ್ತ್ರ ಕ್ರಿಯೆಯನ್ನು ಮಾಡಿದೆ. ಇದು ಟರ್ಕಿ ಸರಕಾರವು ಸಿರಿಯಾದಲ್ಲಿ ನಿರ್ಮಿಸಿದ ಆಸ್ಪತ್ರೆಯಲ್ಲಿ ನಡೆದಿದೆ.

ಸಿರಿಯಾದಿಂದ ಟರ್ಕಿಗೆ ರೋಗಿಗಳನ್ನು ಕಳುಹಿಸುವುದನ್ನು ಕಡಿಮೆ ಮಾಡುವುದು, ಸಿರಿಯಾದ ಮೆಡಿಕಲ್ ಉದ್ಯೋಗಿಗಳಿಗೆ ಈ ವಿಷಯದಲ್ಲಿ ಹೆಚ್ಚಿನ ತರಬೇತಿ ಕೊಡುವುದು ಟರ್ಕಿಯ ಆರೋಗ್ಯ ಸಚಿವಾಲಯದ ದೀರ್ಘ ಕಾಲದ ಯೋಜನೆಯಾಗಿದೆ.

ಈ ಹಿನ್ನೆಲೆಯಲ್ಲಿ ಎರಡು ದಿವಸಗಳಲ್ಲಿ ಜನರಲ್ ಸರ್ಜರಿ, ಯುರೋಲಜಿ, ನ್ಯೂರೋಲಜಿ, ಗೈನೋಲಜಿ, ಆರ್ಥೊಪೆಡಿಕ್ಸ್, ಕಾಸ್ಮೇಟಿಕ್ ಆಪರೇಷನ್ ಇತ್ಯಾದಿ ವಿವಿಧ ಶಸ್ತ್ರ ಕ್ರಿಯೆಗಳನ್ನು ಈ ತಂಡ ಮಾಡಿ ಇತಿಹಾಸ ನಿರ್ಮಿಸಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ.