ಟ್ರಂಪ್ ಪರ ನಿಂತಿದ್ದ ಅಟಾರ್ನಿ ಜನರಲ್ ರಾಜೀನಾಮೆ

0
417

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಮೋಸ ನಡೆದಿದೆ ಎಂದು ಟ್ರಂಪ್‍ರೊಂದಿಗೆ ಸುಳ್ಳು ಪ್ರಚಾರ ಮಾಡಿದ್ದ ಅಮೆರಿಕಾದ ಅಟಾರ್ನಿ ಜನರಲ್ ವಿಲಿಯಂ ಬಾರ್ ರಾಜೀನಾಮೆ ನೀಡಿದ್ದಾರೆ.

ಇದರೊಂದಿಗೆ ಜೆಫ್ ರೊಸಾನರನ್ನು ಟ್ರಂಪ್ ಆಕ್ಟಿಂಗ್ ಅಟಾರ್ನಿ ಜನರಲ್ ಆಗಿ ನೇಮಕಗೊಳಿಸಿದ್ದಾರೆ.

ಇದೇ ವೇಳೆ ವಿಲಿಯಂ ಬಾರ್ ಅಮೆರಿಕದ ಪ್ರಜಾಪ್ರಭುತ್ವಕ್ಕೆ ಲೆಕ್ಕ ಮಾಡಲಾಗದಷ್ಟು ಹಾನಿ ಮಾಡಿದರೆಂದು ಕಾಂಗ್ರೆಸ್‍ನ ಡೆಮೋಕ್ರಾಟಿಕ್ ಸದಸ್ಯ ಡೆವಿಡ್ ಸಿಸಿಲ್ಲಿನ್ ಆರೋಪಿಸಿದ್ದಾರೆ.

ಟ್ರಂಪ್ ಜೊತೆ ನಿಂತು ಸುಳ್ಳು ಪ್ರಚಾರ ಮಾಡಿದ್ದ ಅವರು ಅಟಾರ್ನಿ ಜನರಲ್ ಸ್ಥಾನಕ್ಕೆ ಕಳಂಕ ತಂದಿದ್ದಾರೆ ಎಂದು ಕಾಂಗ್ರೆಸ್‍ನ ಇನ್ನೊಬ್ಬ ಪ್ರತಿನಿಧಿಯಾಗಿದ್ದ ಆಡಂ ಶಿಪ್ ಆರೋಪಿಸಿದ್ದರು. ಈ ಮಧ್ಯೆ ಅಟಾರ್ನಿ ಜನರಲ್ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಅಮೇರಿಕಾದಲ್ಲಿ ಚರ್ಚೆಯಾಗುತ್ತಿದೆ.