ಪ್ರತಿದಿನ 80 ಕೋಟಿಗೂ ಹೆಚ್ಚು ಫಾಸ್ಟ್ ಟ್ಯಾಗ್ ಶುಲ್ಕ ಸಂಗ್ರಹ- ಎನ್‌ಎಚ್‌ಎಐ

0
545

ಸನ್ಮಾರ್ಗ ವಾರ್ತೆ

ನವದೆಹಲಿ: ಫಾಸ್ಟ್‌ಟ್ಯಾಗ್‌ಗಳ ಮೂಲಕ ದೈನಂದಿನ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹವು 80 ಕೋಟಿ ದಾಟಿದೆ ಎಂದು ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಶುಕ್ರವಾರ ತಿಳಿಸಿದೆ. 2021ರ ಜನವರಿ 1 ರಿಂದ ಕೇಂದ್ರ ಸರ್ಕಾರವು ಎಲ್ಲಾ ವಾಹನಗಳಿಗೆ ಫಾಸ್ಟ್‌ಟ್ಯಾಗ್‌ಗಳನ್ನು ಕಡ್ಡಾಯಗೊಳಿಸುತ್ತಿರುವುದರಿಂದ ಈ ಮಾಹಿತಿಯು ಹೊರಬಂದಿದೆ. ಇಲ್ಲಿಯವರೆಗೆ 2.20 ಕೋಟಿಗೂ ಹೆಚ್ಚು ಫಾಸ್ಟ್‌ಟ್ಯಾಗ್‌ಗಳನ್ನು ನೀಡಲಾಗಿದೆ ಮತ್ತು ದೈನಂದಿನ ವಹಿವಾಟು 50 ಲಕ್ಷವನ್ನು ಮುಟ್ಟಿದೆ ಎಂದು ಎನ್‌ಎಚ್‌ಎಐ ಹೇಳಿದೆ.