ಭಾರತ: ಕೊರೋನ ಸಾವು ಪ್ರಕರಣಗಳಲ್ಲಿ ಗಣನೀಯ ಇಳಿಕೆ

0
487

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಡಿ. 26: ಆರು ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಭಾರತದಲ್ಲಿ ಕೊರೋನದಿಂದ ಒಂದು ದಿನದಲ್ಲಿ ಮೃತಪಟ್ಟವರ ಸಂಖ್ಯೆ 300ಕ್ಕೂ ಕೆಳಗಿಳಿದಿದೆ. 251 ಮಂದಿ ಕಳೆದ ದಿವಸ ಕೊರೋನದಿಂದ ಮೃತಪಟ್ಟಿದ್ದಾರೆ. 22,273 ಜನರಲ್ಲಿ ಹೊಸದಾಗಿ ಸೋಂಕು ಧೃಢವಾಗಿದೆ

1.01,69,118 ಮಂದಿಗೆ ಇದುವರೆಗೆ ಭಾರತದಲ್ಲಿ ಕೊರೋನ ದೃಢಪಟ್ಟಿದ್ದು 1,47,343 ಮಂದಿ ಮೃತಪಟ್ಟಿದ್ದಾರೆ. 97,40,108 ಮಂದಿ ರೋಗದಿಂದ ಗುಣಮುಖರಾಗಿದ್ದಾರೆ. ಶೇ. 95.7 ಜನರು ರೋಗ ಮುಕ್ತವಾಗಿದ್ದಾರೆ. ಇದೇ ವೇಳೆ, ಕೊರೋನದಿಂದ ಚಿಕಿತ್ಸೆ ಪಡೆಯುವವರ ಸಂಖ್ಯೆ ಈಗ ಮೂರು ಲಕ್ಷಕ್ಕೂ ಕಡಿಮೆಯಾಗಿದೆ. 2,81,667 ಮಂದಿ ಈಗ ಚಿಕಿತ್ಸೆ ಪಡೆಯುತ್ತಿದ್ದಾರೆ. ಡಿಸೆಂಬರ್-19ಕ್ಕೆ ಭಾರತದ ಒಟ್ಟು ಕೊರೋನ ಸೋಂಕಿತರ ಸಂಖ್ಯೆಯು ಒಂದು ಕೋಟಿ ತಲುಪಿದೆ.