ಮಧ್ಯಪ್ರದೇಶದಲ್ಲಿಯೂ ಲವ್‍ ಜಿಹಾದ್ ಕಾನೂನು: 5ವರ್ಷ ಜೈಲು, 25,000 ರೂ ದಂಡ

0
366

ಸನ್ಮಾರ್ಗ ವಾರ್ತೆ

ಭೋಪಾಲ,ಡಿ.26: ಮಧ್ಯಪ್ರದೇಶದಲ್ಲಿ ಡಿಸೆಂಬರ್ 28ಕ್ಕೆ ಮೂರು ದಿನಗಳ ವಿಧಾನಸಭಾ ಅಧಿವೇಶನ ಆರಂಭವಾಗಲಿದ್ದು, ಧಾರ್ಮಿಕ ಸ್ವಾತಂತ್ರ್ಯ ಮಸೂದೆ 2020ಕ್ಕೆ ಸಚಿವ ಸಂಪುಟದಲ್ಲಿ ಅಂಗೀಕಾರ ಸಿಕ್ಕಿದೆ. ಉತ್ತರ ಪ್ರದೇಶದಲ್ಲಿ ಮತಾಂತರ ನಿಷೇಧ ಕಾನೂನು ಜಾರಿಯಾಗಿದ್ದು ಇದಕ್ಕೆ ಸಮಾನವಾದ ಧಾರ್ಮಿಕ ಸ್ವಾತಂತ್ರ್ಯ ಮಸೂದೆಗೆ ಶಿವರಾಜ್ ಸಿಂಗ್ ಚೌಹಾನ್ ನೇತೃತ್ವದ ಅಧ್ಯಕ್ಷತೆಯ ಸಚಿವ ಸಂಪುಟ ಸಭೆಯಲ್ಲಿ ಅಂಗೀಕಾರ ನೀಡಲಾಗಿದೆ.

ಯಾವುದೇ ವ್ಯಕ್ತಿಯನ್ನು ಬಲವಂತದಿಂದ ಮತಾಂತರ ಮಾಡುವುದಕ್ಕೆ 1-5 ವರ್ಷಗಳವರೆ ಜೈಲು ಶಿಕ್ಷೆ 25,000 ದಂಡವನ್ನು ವಿಧಿಸಲಾಗುವುದು. ಅಪ್ರಾಪ್ತ ವಯಸ್ಕರನ್ನು ಮತಾಂತರಕ್ಕೆ ಪ್ರೋತ್ಸಾಹಿಸಿದರೆ ಕನಿಷ್ಠ ಎರಡು ವರ್ಷದಿಂದ 5 ವರ್ಷದವರೆಗೆ ಶಿಕ್ಷೆ ಲಭಿಸಲಿದೆ ಎಂದು ರಾಜ್ಯದ ಗೃಹ ಸಚಿವ ನರೋತ್ತಂ ಮಿಶ್ರ ಹೇಳಿದರು.

ಹೊಸ ಮಸೂದೆ ಪ್ರಕಾರ ಅಪ್ರಾಪ್ತರು, ಮಹಿಳೆಯರು, ಎಸ್ಸಿ, ಎಸ್ಟಿ ವಿಭಾಗಕ್ಕೆ ಸೇರಿದವರನ್ನು ಬಲವಂತದಿಂದ ಮತಾಂತರಗೊಳಿಸಿದರೆ ಕನಿಷ್ಠ ಎರಡು ವರ್ಷದಿಂದ 5 ವರ್ಷಗಳವರೆಗೆ ಜೈಲು ಶಿಕ್ಷೆ ಕನಿಷ್ಠ 50 ಸಾವಿರ ದಂಡ ಲಭಿಸಲಿದೆ ಎಂದು ನರೋತ್ತಂ ಮಿಶ್ರ ಹೇಳಿದರು.

1968ರ ಮಧ್ಯಪ್ರದೇಶ ಧರ್ಮ ಸ್ವಾತಂತ್ರ್ಯ ಅಧಿನಿಯಮವನ್ನು ಇದು ಇಲ್ಲದಾಗಿಸಲಿದ್ದು ಈ ಕಾನೂನು ಕಲಹರಣಗೊಂಡಿದೆ ಎಂದು ಬಿಜೆಪಿ ಹೇಳಿದೆ. ಮಧ್ಯಪ್ರದೇಶದ ಕಾನೂನು ಪ್ರಕಾರ ಸ್ವಂತ ಇಚ್ಛೆಯಿಂದ ಮತಾಂತರ ಮಾಡುವ ವ್ಯಕ್ತಿಯಾದರೆ ಜಿಲ್ಲಾ ಮ್ಯಾಜಿಸ್ಟ್ರೇಟ್‍ಗೆ ವರದಿ ನೀಡುವ ಅಗತ್ಯವಿಲ್ಲ. ಮತಾಂತರ ಮಾಡಲು ಭೇಟಿ ಮಾಡಿದ ಪುರೋಹಿತ ಜಿಲ್ಲಾಡಳಿತಕ್ಕೆ ತಿಳಿಸಿದರೆ ಸಾಕು.