ಗೆಳೆಯನಿಗಾಗಿ ಮೋದಿ ಗೋಗರೆದದ್ದು ನಾವು ಮರೆಯಬಾರದು: ಪ್ರಶಾಂತ್ ಭೂಷಣ್ ವ್ಯಂಗ್ಯ

0
776

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಅಮೆರಿಕದ ಪಾರ್ಲಿಮೆಂಟಿನ ಕ್ಯಾಪಿಟಲ್ ಹಾಲಿನಲ್ಲಿ ಟ್ರಂಪ್ ಬೆಂಬಲಿಗರು ನಡೆಸಿದ ದಾಂಧಲೆಯಲ್ಲಿ ಮೋದಿಯ ವಿರುದ್ಧ ಪ್ರಮುಖ ವಕೀಲ ಪ್ರಶಾಂತ್ ಭೂಷಣ್ ಪರೋಕ್ಷ ಮಾತಾಡಿದ್ದಾರೆ. ಪ್ರಜಾಪ್ರಭುತ್ವ ಸುಟ್ಟುಹಾಕಲು ಮೋದಿಯ ಫ್ರೆಂಡ್ ತನ್ನ ಗೂಂಡಾಗಳನ್ನು ಪ್ರೇರಿಪಿಸಿದಾಗ ಇನ್ನೊಂದು ಸಲ ಟ್ರಂಪ್‍ಗೆ ಅಧಿಕಾರಿ ಕೊಡಿ ಎಂಬ ಮೋದಿಯ ಗೋಗೆರತವನ್ನು ನಾವು ಮರೆಯಬಾರದು ಎಂದು ಪ್ರಶಾಂತ್ ಭೂಷಣ್ ಹೇಳಿದ್ದಾರೆ. ಕಳೆದ ವರ್ಷ ಗುಜರಾತಿನಲ್ಲಿ ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲಿ ಮೈ ಫ್ರೆಂಡ್ ಡೊಲನ್ ಟ್ರಂಪ್ ಎಂದು ಮೋದಿ ತಡವರಿಸಿದ್ದರು. ಹೌಡಿ ಮೋದಿ ಕಾರ್ಯಕ್ರಮದಲ್ಲಿ ಟ್ರಂಪ್‍ಗಾಗಿ ಅಬ್‍ಕೀ ಬಾರ್ ಟ್ರಂಪ್ ಸರಕಾರ ಅಭಿಯಾನವನ್ನು ನೆನಪಿಸಿ ಪ್ರಶಾಂತ್ ಭೂಷಣ್ ಟ್ವೀಟ್ ಮಾಡಿದ್ದಾರೆ.

ಅಮೆರಿಕ ಪಾರ್ಲಿಮೆಂಟಿನಲ್ಲಿ ನಡೆದ ಅಹಿತಕರ ಘಟನೆ ಪ್ರಜಾಪ್ರಭುತ್ವವನ್ನು ಸುಟ್ಟುಹಾಕುವುದಕ್ಕಾಗಿ ಇದ್ದುದು ಮೋದಿಯ ಫ್ರೆಂಡ್ ಡೊಲಾನ್ ಟ್ರಂಪ್ ತನ್ನ ಗೂಂಡಾಗಳನ್ನು ಪ್ರೇರೇಪಿಸುವಾಗ ಮೋದಿಯ ಅಬ್‍ಕೀ ಬಾರ್ ಟ್ರಂಪ್ ಸರಕಾರ್ ಎಂಬ ಕೂಗನ್ನು ನಾವು ಎಂದೂ ಮರೆಯಬಾರದು.

ಜೊ ಬೈಡನ್ ವಿಜಯಕ್ಕೆ ಅಂಗೀಕಾರ ನೀಡುವ ಅಮೆರಿಕ ಕಾಂಗ್ರೆಸ್‍ನ ಎರಡು ಸದನಗಳ ಸಮ್ಮೇಳನಗಳ ವೇಳೆ ಸಾವಿರಾರು ಟ್ರಂಪ್ ಬೆಂಬಲಿಗರು ಕ್ಯಾಪಿಟಲ್ ಮಂದಿರದೊಳಗೆ ನುಗ್ಗಿದ್ದರು. ಸೆನೆಟ್ ಚೇಂಬರ್‌ನಲ್ಲಿ ನುಗ್ಗಿ ಅಧ್ಯಕ್ಷರ ವೇದಿಕೆಯಲ್ಲಿ ಹೋಗಿ ಕುಳಿತರು. ಭಾರತೀಯ ಸಮಯದಂತೆ ಗುರುವಾರ ಬೆಳಗ್ಗೆ ಘಟನೆ ನಡೆದಿತ್ತು.