ಸನ್ಮಾರ್ಗ ವಾರ್ತೆ
ಲಕ್ನೋ: ಮೇಲ್ಜಾತಿಯವರ ಕೊಲೆ ಬೆದರಿಕೆ ಸಹಿಸಲಾಗದೆ ಅಂಬೇಡ್ಕರ್ ರೈಟ್ ಹಾಡುಗಾರ ದಂಪತಿ ಭೂಗತರಾಗಿ, ಜೀವನ ಸವೆಸುತ್ತಿರುವ ಬಗ್ಗೆ ತಿಳಿದು ಬಂದಿದೆ.
ತಮ್ಮ ಸ್ಟುಡಿಯೊ ಸುಟ್ಟುಹಾಕಿ ಕೊಲ್ಲುವುದಾಗಿ ಬೆದರಿಕೆಯಿಂದಾಗಿ ಉತ್ತರ ಪ್ರದೇಶದ ದಲಿತ ಸಂಗೀತಗಾರ ವಿಶಾಲ್ ಗಾಝಿಪುರ, ಸಪ್ನಾ ಬೌದ್ಧ್ ರವರು ತಮ್ಮ ಎರಡು ವರ್ಷದ ಮಗುವಿನೊಂದಿಗೆ ಅಕ್ಟೋಬರ್ ನಿಂದ ಭೂಗತರಾಗಿ ಜೀವನ ನಡೆಸಲು ನಿರ್ಬಂಧಿತರಾಗಿದ್ದಾರೆ.
ಗಾಝಿಪುರದ ವಿಷ್ಣುಪುರಿಯಾದಲ್ಲಿದ್ದ ಇವರ ಸ್ಟುಡಿಯೋವನ್ನು ಸುಟ್ಟು ಹಾಕಿದ ಘಟನೆಯಲ್ಲಿ ಎಫ್ಐಆರ್ ದಾಖಲಿಸಿದರೂ ಈವರೆಗೂ ಯಾರನ್ನೂ ಬಂಧಿಸಲಾಗಿಲ್ಲ ಎಂದು ತಿಳಿದು ಬಂದಿದೆ.
ಖಾಸಗೀಕರಣ, ನಿರುದ್ಯೋಗ, ಭ್ರಷ್ಟಾಚಾರ ಮುಂತಾದ ವಿಷಯದಲ್ಲಿ ನೂರಕ್ಕೂ ಹೆಚ್ಚು ಅಲ್ಬಂಗಳನ್ನು ದಂಪತಿ ಹೊರತಂದಿದ್ದಾರೆ. ಕೆಲವು ತಿಂಗಳ ಹಿಂದೆ ಇವರು ಹೊರತಂದ ಹಾಡುಗಳು ಹೆಚ್ಚು ಚರ್ಚೆಗೊಳಗಾಗಿದ್ದವು.
ಪ್ರಧಾನಿ ಮತ್ತು ಕೇಂದ್ರ ಸರಕಾರದ ಬಗ್ಗೆ ಇವರು ಹಾಡುತ್ತಿದ್ದ ಹಾಡುಗಳು ಅತಿ ಹೆಚ್ಚು ವಿಮರ್ಶೆಗೊಳಗಾಗಿದ್ದವು. ಅದರಲ್ಲಿಯೂ ಮುಖ್ಯವಾಗಿ ಸಾಂವಿಧಾನಿಕ ಸಂಸ್ಥೆಗಳನ್ನು ಬುಡಮೇಲುಗೊಳಿಸುವುದರ ವಿರುದ್ಧ ಪ್ರತಿಕ್ರಿಯೆಯಾಗಿ ಒಬ್ಬ ಹಿಟ್ಲರ್ ಜರ್ಮನಿ ನಾಶಪಡಿಸಿದ. ಈಗ ಇದೊ ಸುಳ್ಳನೊಬ್ಬ ಭಾರತವನ್ನೂ ಎಂದು ಆರಂಭವಾಗುವ ಹಾಡಿನ ವಿರುದ್ಧ ಬೆದರಿಕೆ ಬಂದಿತ್ತು.
ಅಕ್ಟೋಬರ್ 29ಕ್ಕೆ ಸ್ಟುಡಿಯೊಕ್ಕೆ ಬೆಂಕಿ ಹಾಕಲಾಗಿತ್ತು. ದೂರು ನೀಡಿದರೆ ಕೊಲ್ಲುವ ಬೆದರಿಕೆಯೊಡ್ಡಲಾಯಿತು. ಸುರಕ್ಷೆ ಕೋರಿ ಮಾನವಹಕ್ಕು ಆಯೋಗ, ಪರಿಶಿಷ್ಟ ಜಾತಿ-ವರ್ಗ ಆಯೋಗ, ಡಿಜಿಪಿಗೆ ದೂರು ನೀಡಿದರೂ ಸೂಕ್ರ ಕ್ರಮ ಕೈಗೊಂಡಿರಲಿಲ್ಲ.
ಅಲಾಹಾಬಾದಿನಿಂದ ಸಂಗೀತ ಕಲಿತು ಮುಖ್ಯಧಾರ ಸಂಗೀತ ಶಾಖೆಯಲ್ಲಿ ಹಾಡತೊಡಗಿದ ವಿಶಾಲ್ ಡಾ. ಅಂಬೇಡ್ಕರ್ರ ಚಿಂತನಾ ಸರಣಿಗೆ ಆಕರ್ಷಿತರಾಗಿ ಸಾಮಾಜಿಕ ನ್ಯಾಯದ ಆಶಯಗಳನ್ನೊಳಗೊಂಡ ಹಾಡುಗಳನ್ನು ಮಾತ್ರ ಹಾಡಿ ಪ್ರಚಾರ ಪಡಿಸಲು ಆರಂಭಿಸಿದದರು. ತಮ್ಮ ಹಾಡಿನೊಂದಿಗೆ ವಿರೋಧವಿರುವವರೊಡನೆ ಸಂವಾದಕ್ಕೆ ಸಿದ್ಧ ಅಕ್ರಮ ಮಾರ್ಗ ಅವಲಂಬಿಸುವವರೊಂದಿಗೆ ರಾಜಿಯಿಲ್ಲ ಎಂದು ವಿಶಾಲ್ ಮತ್ತು ಸ್ವಪ್ನ ಹೇಳುತ್ತಾರೆ.
ಯಾರು ಬೆದರಿಕೆಯೊಡ್ಡಿದರೂ ಬಾಬಾ ಸಾಹೇಬರ ಆಶಯವನ್ನು ಪ್ರಚಾರ ಪಡಿಸುವುದಾಗಿ ದಂಪತಿಗಳು ಹೇಳಿದ್ದಾರೆ.












