ಸನ್ಮಾರ್ಗ ವಾರ್ತೆ
ಬೆಂಗಳೂರು : ಮಹಾತ್ಮಾ ಗಾಂಧೀಜಿ ಹತ್ಯೆಯಾದ ದಿನದ ಹಿನ್ನೆಲೆಯಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಆಯೋಜಿಸಲಾಗಿದ್ದ ಉಪವಾಸ ಸತ್ಯಾಗ್ರಹ ಕಾರ್ಯಕ್ರಮದ ಮಧ್ಯೆಯೇ ಕನ್ನಡ ಸುದ್ದಿವಾಹಿನಿಯ ವರದಿಗಾರ್ತಿಯನ್ನು ಸತ್ಯಾಗ್ರಹದಲ್ಲಿದ್ದವರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಫ್ರೀಡಂ ಪಾರ್ಕಿನಲ್ಲಿ ಉಪವಾಸ ಸತ್ಯಾಗ್ರಹದ ವೇಳೆ ರೈತ ಸಂಘದ ಅಧ್ಯಕ್ಷರಾದ ಬಡಗಲಪುರ ನಾಗೇಂದ್ರ ಅವರು ಪ್ರಾಸ್ತಾವಿಕವಾಗಿ ಮಾತಾಡುತ್ತಿದ್ದರು. ಆಗ ಸುವರ್ಣ ಚಾನೆಲ್ನ ವರದಿಗಾರ್ತಿ ದುರುದ್ದೇಶಪೂರ್ವಕವಾಗಿ ಅವರ ಮುಂದೆಯೇ ನಿಂತು ಲೈವ್ ಮಾಡಲು ಶುರು ಮಾಡಿದರು. ವೇದಿಕೆಯಲ್ಲಿದ್ದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರ ಬಳಿಗೆ ಬಂದು ಮಾತನಾಡುವಂತೆ ಕೇಳಿಕೊಂಡಾಗ ಸಂಘಟಕರಲ್ಲೊಬ್ಬರು ಹೋಗಿ ಹಾಗೆ ಮಾಡಬಾರದೆಂದು ವಿನಂತಿ ಮಾಡಿದರು. ಆದರೆ ನಿಲ್ಲಿಸದಿದ್ದರಿಂದ ಸುವರ್ಣ ಚಾನೆಲ್ ನ ವರದಿಗಾರ್ತಿಯನ್ನು ತರಾಟೆಗೆ ತೆಗೆದುಕೊಳ್ಳಲಾಯಿತು. ಕಾರ್ಯಕ್ರಮದಲ್ಲಿದ್ದವರು ಧಿಕ್ಕಾರ ಕೂಗಿದ ನಂತರ, ಪೊಲೀಸರು ಸ್ಥಳಕ್ಕೆ ಬಂದು ವರದಿಗಾರ್ತಿಯನ್ನು ಪಕ್ಕಕ್ಕೆ ಕರೆದುಕೊಂಡು ಹೋದರು.
ಫೇಸ್ ಬುಕ್ ನಲ್ಲಿ ಮುತ್ತುರಾಜ್ ಎಂಬವರು ಘಟನೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ.
https://m.facebook.com/story.php?story_fbid=3761043237323738&id=100002542953338












