ಕಾಡಾನೆ ದಾಳಿಯಿಂದ ಪ್ರವಾಸಿ ಮಹಿಳೆ ಮೃತ್ಯು: ರೆಸಾರ್ಟ್ ಮಾಲಕರ ಬಂಧನ

0
788
ಬಂಧಿತ ಸುನೀರ್ ಹಾಗೂ ರಿಯಾಝ್

ಸನ್ಮಾರ್ಗ ವಾರ್ತೆ

ಕೇರಳ: ವಯನಾಡಿನ ಎಳಂಬಾರದಲ್ಲಿ ಖಾಸಗಿ ರೆಸಾರ್ಟ್ನ ಟೆಂಟ್‍ನಲ್ಲಿದ್ದ ಪ್ರವಾಸಿಯೊಬ್ಬರು ಕಾಡಾನೆಯ ದಾಳಿಗೆ ಸಿಲುಕಿ ಮೃತಪಟ್ಟ ಘಟನೆ ನಡೆದಿದ್ದು, ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರೆಸಾರ್ಟ್ ನಡೆಸುತ್ತಿದ್ದ ನೂಲ್‍ಪುಯ ನಿವಾಸಿ ಸುನೀರ್, ಚಿರಾಲ್ ನ ರಿಯಾಝ್ ಬಂಧಿತರು. ಇಬ್ಬರನ್ನು ಠಾಣೆಗೆ ಕರೆಯಿಸಿಕೊಂಡ ಬಳಿಕ ಮೇಪ್ಪಡಿ ಸಿಐಯ ನೇತೃತ್ವದಲ್ಲಿ ಬಂಧಿಸಲಾಗಿದೆ. ಇಬ್ಬರ ಮೇಲೆ ನರಹತ್ಯೆ ಪ್ರಕರಣ ದಾಖಲಾಗಿದೆ.

ಮೇಪ್ಪಡಿ ರೆಸಾರ್ಟ್ ನಲ್ಲಿ ಪ್ರವಾಸಕ್ಕೆ ಬಂದ ಕನ್ನಡಿಪ್ಪರಂಭ್ ನಿವಾಸಿ ಮಹಿಳೆ ಶಾಹಿನಾ() ಆನೆ ದಾಳಿಯಿಂದ ಮೃತಪಟ್ಟಿದ್ದರು. ಕೊಝಿಕ್ಕೋಡ್ ಪರಂಬ್ರದ ದಾದುನ್ನಜೂಂ ಆರ್ಟ್ಸ್ ಆಂಡ್ ಸಯನ್ಸ್ ಕಾಲೇಜಿನ ಅಧ್ಯಾಪಕಿ ಶಾಹಿನಾ 30 ಮಂದಿ ಮಹಿಳೆಯರ ಜೊತೆ ರೆಸಾರ್ಟ್ ನ ಹೊರಗೆ ಕಟ್ಟಲಾಗಿದ್ದ ಟೆಂಟಿನಲ್ಲಿರುವಾಗ ಕಾಡಾನೆ ದಾಳಿ ಮಾಡಿತ್ತು. ಈ ಸಂದರ್ಭ ಇತರರು ಓದಿ ಹೋಗಿ ಪಾರಾಗಿದ್ದಾರೆ, ಶಾಹಿನಾ ಗಂಭೀರ ಗಾಯಗೊಂಡಿದ್ದರು. ಆನೆಯ ತುಳಿತದಿಂದ ಗಂಭೀರ ಗಾಯಗೊಂಡಿದ್ದ ಅಧ್ಯಾಪಕಿ ಶಾಹಿನಾ ನಂತರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಜಿಲ್ಲಾಧಿಕಾರಿಯ ತನಿಖೆಯಲ್ಲಿ ರೆಸಾರ್ಟಿನಿಂದ ಗಂಭೀರ ಲೋಪ ಆಗಿದ್ದು, ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.