ವಿಲೇಜ್ ಕಿಚನ್ ಯೂಟ್ಯೂಬರ್ ಗಳೊಂದಿಗೆ ಬಿರಿಯಾನಿ ಸವಿದ ರಾಹುಲ್ ಗಾಂಧಿ: ಯೂಟ್ಯೂಬ್ ನಲ್ಲಿ ಟ್ರೆಂಡ್

0
600

ಸನ್ಮಾರ್ಗ ವಾರ್ತೆ

ಚೆನ್ನೈ: ತಮಿಳುನಾಡಿನ ಪ್ರಸಿದ್ಧ ಅಡುಗೆ ತಯಾರಕ ಯೂಟ್ಯೂಬರ್ ಗಳಾದ ವಿಲೇಜ್ ಕಿಚನ್ ನೊಂದಿಗೆ ಬಿರಿಯಾನಿ ಸವಿಯುವ ಮೂಲಕ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಯೂಟ್ಯೂಬ್ ನಲ್ಲಿ ಟ್ರೆಂಡ್ ಆಗಿದ್ದಾರೆ. ಸದ್ಯ ಈ ಕಾರ್ಯಕ್ರಮ ಯೂಟ್ಯೂಬ್ ನಲ್ಲಿ ಟಾಪ್ ಟ್ರೆಂಡಿಂಗ್ ನಲ್ಲಿ ಎರಡನೇ ಸ್ಥಾನದಲ್ಲಿದೆ.

ತಮಿಳುನಾಡು ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳ ಮುಂಚೆಯೇ ಕಾಣಿಸಿಕೊಂಡಿರುವ ಈ ವಿಡಿಯೋ, ಸಾಕಷ್ಟು ಸುದ್ದಿ ಆಗುತ್ತಿದೆ. ಕಾಡುಮೇಡು, ಹಳ್ಳಿಗಾಡಿನಲ್ಲಿ ಅಡುಗೆ ಮಾಡಿ ತೋರಿಸುವ ಈ ಚಾನೆಲ್ ನ ತಂಡ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದೆ. ಈ ಚಾನೆಲ್ ಈ ಬಾರಿಯ ವಿಶೇಷ ಅತಿಥಿಯಾಗಿ ರಾಹುಲ್ ಗಾಂಧಿ ಭಾಗವಹಿಸಿ, ತಂಡ ಸಿದ್ಧಪಡಿಸಿದ ಮಶ್ರೂಮ್(ಅಣಬೆ) ಬಿರಿಯಾನಿ ಸವಿದು ಸಂಭ್ರಮಿಸಿದರು.

ಅಡುಗೆ ಸಿದ್ಧಪಡಿಸುವಲ್ಲಿ ರಾಹುಲ್ ಗಾಂಧಿ ಕೂಡ ಸಹಕರಿಸಿದ್ದು, ವೈರಲ್ ಆಗಿದೆ. ನೀಲಿ ಬಣ್ಣದ ಟೀ ಶರ್ಟ್ ಧರಿಸಿದ್ದ ರಾಹುಲ್ ಗಾಂಧಿ ಅಡುಗೆ ಮಾಡುವ ನಡುವೆ, ಊಟದ ನಡುವೆ ತಮಿಳು ಮಾತನಾಡುವುದನ್ನು ಕಾಣಬಹುದಾಗಿದೆ. ಮಶ್ರೂಮ್ ಬಿರಿಯಾನಿ ಯನ್ನು ಸಾಂಪ್ರದಾಯಿಕ ಚಾಪೆ ಮೇಲೆ ಕುಳಿತು ಸವಿದಿದ್ದಾರೆ. ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಈ ವೇಳೆ ಜೊತೆಗಿದ್ದರು.

ಯೂಟ್ಯೂಬ್ ವಿಡಿಯೋ ವೀಕ್ಷಿಸಿ.