ಮ್ಯಾನ್ಮಾರ್ ಸೇನಾ ಕ್ಷಿಪ್ರ ಕ್ರಾಂತಿ: ಆತಂಕ ವ್ಯಕ್ತಪಡಿಸಿದ ಭಾರತ

0
658

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಸೋಮವಾರ ಬೆಳಗ್ಗೆ ಮ್ಯಾನ್ಮಾರಿನಲ್ಲಿ ಸೈನಿಕ ಬುಡುಮೇಲು ಕೃತ್ಯ ನಡೆದಿದ್ದು, ಒಂದು ವರ್ಷಕ್ಕೆ ತುರ್ತು ಪರಿಸ್ಥಿತಿ ಘೋಷಣೆಯಾಗಿದೆ. ಶಾಂತಿಗೆ ನೋಬೆಲ್ ಪಡೆದುಕೊಂಡಿದ್ದ ಆಂಗ್ ಸಾನ್ ಸೂ ಕಿ, ಅಧ್ಯಕ್ಷ ಯುವನ್ ಮಿಂಟ್‍ ಮತ್ತು ಸಚಿವರನ್ನು ಬೆಳಗ್ಗೆ ಸೈನ್ಯ ಬಂಧಿಯಾಗಿಟ್ಟುಕೊಂಡಿದೆ.

ದೇಶದ ಅಧಿಕೃತ ಟಿವಿ, ರೇಡಿಯೊ ಪ್ರಸಾರಕ್ಕೆ ನಿಷೇಧ ಹೇರಲಾಗಿದ್ದು ರಾಜಧಾನಿಯಲ್ಲಿ ಸಾರಿಗೆ ಸಂಚಾರಕ್ಕೆ ನಿಯಂತ್ರಣ ಹೇರಲಾಗಿದ್ದು, ಮೊಬೈಲ್ ಸೇವೆ ರದ್ದಾಗಿದೆ. ಪ್ರಾಂತದ ಮುಖ್ಯಮಂತ್ರಿಗಳು ಮತ್ತು ಹಿರಿಯ ಅಧಿಕಾರಿಗಳನ್ನು ಜೈಲಿಗಟ್ಟಲಾಗಿದೆ ಎಂದು ಸೂ ಕಿಯ ನ್ಯಾಶನಲ್ ಲೀಗ್ ಫಾರ್ ಡೆಮಕ್ರಾಸಿ ವಕ್ತಾರ ತಿಳಿಸಿದ್ದಾರೆ.

ಭಾರತ ಸರಕಾರ ಮ್ಯಾನ್ಮಾರಿನಲ್ಲಿ ನಡೆದ ಘಟನೆಗಳಿಗೆ ಆತಂಕ ವ್ಯಕ್ತಪಡಿಸಿದ್ದು ಹೊಸ ಬೆಳವಣಿಗೆಯನ್ನು ನಿರೀಕ್ಷಿಸುತ್ತಿದ್ದೇವೆ ಎಂದು ವಿದೇಶ ಸಚಿವಾಲಯ ಪತ್ರಿಕಾ ಹೇಳಿಕೆ ನೀಡಿದೆ. ಬಂಧಿಸಿಟ್ಟಿರುವ ಹದಿನೈದು ಮಂದಿ ನಾಯಕರನ್ನು ಬಿಡುಗಡೆಗೊಳಿಸಬೇಕು ಮತ್ತು ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಬೇಕೆಂದು ಅಮೆರಿಕ, ಆಸ್ಟ್ರೇಲಿಯ ಕರೆ ನೀಡಿದೆ.