ರೈತರನ್ನು ಬೆಂಬಲಿಸಿ ಮತ್ತಷ್ಟು ಮಹಾ ಪಂಚಾಯತ್‍ಗಳ ರಂಗಪ್ರವೇಶ: ಹೋರಾಟ ಸ್ಥಳಗಳತ್ತ ಹರಿದು ಬರುತ್ತಿರುವ ಜನಸಾಗರ

0
412

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಫೆ.1: ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಮತ್ತಷ್ಟು ಪಂಚಾಯತ್‍ಗಳು ರಂಗಪ್ರವೇಶಿಸಿದೆ.

ಉತ್ತರ ಪ್ರದೇಶದ ಮುಝಫ್ಫರ್ ನಗರ್ ಬೆನ್ನಿಗೆ ರವಿವಾರ ಭಾಗ್‍ಪತ್‍ನಲ್ಲಿ ಸಾವಿರಾರು ಮಂದಿ ಮಹಾಪಂಚಾತ್ ನಡೆಸಿ ರೈತರಿಗೆ ಸಕಲ ಬೆಂಬಲ ಘೋಷಿಸಿದ್ದಾರೆ. 450 ಕಿಲೊಮೀಟರ್ ದೂರದ ಹೋರಾಟ ವೇದಿಕೆಗೆ ಇಲ್ಲಿಂದ ರೈತರು ಹೊರಟು ಬರಲಿದ್ದಾರೆ.

ಉತ್ತರಪ್ರದೇಶದ ಬಿಜ್ನೋರ್, ಹರಿಯಾಣದ ಜಿಮದ, ಬುಧವಾರ ಮಹಾಪಂಚಾಯತ್ ನಡೆಯಲಿದೆ. ಮುಝಪ್ಫರ್‍ಪುರದಿಂದ ಸಾವಿರಾರು ಮಂದಿ ಗಾಝಿಪುರ ರೈತ ಪ್ರತಿಭಟನೆ ವೇದಿಕೆಯಿರುವೆಡೆಗೆ ಬಂದು ತಲುಪಿದ್ದಾರೆ.

ಪಂಜಾಬ್‍ನಿಂದ 700 ವಾಹನಗಳು ದಿಲ್ಲಿಗೆ ಹೊರಟಿತು. ಮುಖ್ಯ ಗುಜ್ಜರ್ ನಾಯಕ ಮದನ್ ಭಯ್ಯ ರೈತರಿಗೆ ಬೆಂಬಲ ಘೋಷಿಸಿದರು. ಗಾಝಿಪುರದಲ್ಲಿ ಪ್ರತಿಭಟನಾಕಾರರ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.

ಬಂಧಿಸಿದ ರೈತರನ್ನು ಬಿಡುಗಡೆಗೊಳಿಸಬೇಕು. ನಿಶ್ಶರ್ತವಾಗಿ ಚರ್ಚೆಗೆ ತಯಾರೆಂದು ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ತಿಳಿಸಿದರು. ರೈತರಿಂದ ತ್ರಿವರ್ಣಧ್ವಜ ಅವಹೇಳನವಾಗಿಲ್ಲ ಎಂದು ಮನ್‍ ಕಿ ಬಾತ್ ಮಾಡಿದ ಪ್ರಧಾನಿಯ ಹೇಳಿಕೆಗೆ ಅವರು ಉತ್ತರಿಸಿದ್ದಾರೆ. ಸಿಂಘು, ಟಿಕ್ರಿ, ಗಾಝಿಪುರದಲ್ಲಿ ಇಂಟರ್ನೆಟ್ ಸೇವೆ ರವಿವಾರದವರೆಗೆ ಕಡಿವಾಣ ಹಾಕಲಾಗಿತ್ತು. ಇದೇ ವೇಳೆ ಹೋರಾಟ ಸ್ಥಳಕ್ಕೆ ಬರುವ ಪತ್ರಕರ್ತರನ್ನು ಪೊಲೀಸರು ತಡೆಯುತ್ತಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. ಕಾನೂನು ತಡೆದಿರಿಸುತ್ತೇವೆ ಎನ್ನುವ ಸರಕಾರ ಯಾಕೆ ಪಾರ್ಲಿಮೆಂಟ್ ಸಮಿತಿಯ ಪರಿಗಣನೆಗೆ ಕಾನೂನು ತಂದಿಲ್ಲ ಎಂದು ಕಾಂಗ್ರೆಸ್ಸಿನ ಜೈರಾಂ ರಮೇಶ್ ಪ್ರಶ್ನಿಸಿದ್ದಾರೆ.