ಅಲ್ಪಸಂಖ್ಯಾತರ ಕೋಮುವಾದ ಅತ್ಯಂತ ದೊಡ್ಡ ಕೋಮುವಾದ : ಕೇರಳ ಸಿಪಿಎಂ ಕಾರ್ಯದರ್ಶಿ ವಿಜಯ ರಾಘವನ್ ವಿವಾದಾತ್ಮಕ ಹೇಳಿಕೆ

0
583

ಸನ್ಮಾರ್ಗ ವಾರ್ತೆ

ಕೋಝಿಕ್ಕೋಡ್ : ಅಲ್ಪಸಂಖ್ಯಾತರ ಕೋಮುವಾದ ಅತ್ಯಂತ ದೊಡ್ಡ ಕೋಮವಾದ. ಈ ಕೋಮುವಾದವನ್ನು ಪ್ರತಿರೋಧಿಸಲು ನಾವೆಲ್ಲರೂ ಒಟ್ಟಾಗಿರಬೇಕೆಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಎ. ವಿಜಯ ರಾಘವನ್ ವಿವಾದಾತ್ಮಕ ಹೇಳಿಕೆ ನೀಡಿದ್ದು, ಸದ್ಯ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

ಎಲ್‍ಡಿಎಫ್ ಮುನ್ನಡೆ ಜಾಥಾದ ಮುಕ್ಕಂನ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಯಾವ ಕೋಮುವಾದವೂ ಇನ್ನೊಂದು ಕೋಮುವಾದಕ್ಕೆ ಪರಿಹಾರವಾಗುವುದಿಲ್ಲ. ಅಲ್ಪಸಂಖ್ಯಾತರ ಕೋಮುವಾದವನ್ನು ಎತ್ತಿ ಹಿಡಿದು ಅಲ್ಪಸಂಖ್ಯಾತ ಕೋಮುವಾದವನ್ನು ಪ್ರತಿರೋಧಿಸಲು ಸಾಧ್ಯವೇ. ಅದು ಬಹುಸಂಖ್ಯಾತರ ಕೋಮುವಾದವನ್ನು ಮತ್ತು ಅಕ್ರಮ ಚಟುವಟಿಕೆಗಳನ್ನು ಸಮರ್ಥಿಸಿಕೊಂಡಂತೆ ಎಂದು ಹೇಳಿದರು. ಅತ್ಯಂತ ದೊಡ್ಡ ಕೋಮುವಾದ ಅಲ್ಪಸಂಖ್ಯಾತರ ಕೋಮುವಲ್ಲವೇ ಎಂದು ಅವರು ಹೇಳಿದರು. ಇದನ್ನು ಪ್ರತಿರೋಧಿಸಲು ನಾವು ಒಟ್ಟಾಗಿ ನಿಲ್ಲಬೇಕಾಗಿದೆ ಎಂದು ವಿಜಯರಾಘವನ್ ಹೇಳಿದರು.

ಆದರೆ, ತನ್ನ ಹೇಳಿಕೆಯನ್ನು ಮಾಧ್ಯಮಗಳು ತಿರುಚಿವೆ ಎಂದು ಅಲ್ಪಸಂಖ್ಯಾತ ಕೋಮುವಾದ ಅತ್ಯಂತ ದೊಡ್ಡ ಕೋಮುವಾದವೆಂದು ತಾನು ಹೇಳಿಲ್ಲ ಎಂದು ನಂತರ ವಿಜಯರಾಘವನ್ ಮಾಧ್ಯಮಗಳ ಮುಂದೆ ಸ್ಪಷ್ಟೀಕರಣ ನೀಡಿದರು.

ವಿಡಿಯೋ ಕೃಪೆ: MEDIA ONE