ಉತ್ತರ ಪ್ರದೇಶದಲ್ಲಿ ಬಂಧಿಸಲಾದ ಪಿಎಫ್ ಐ ಕಾರ್ಯಕರ್ತರ ವಿರುದ್ಧ ಯುಎಪಿಎ

0
593

ಸನ್ಮಾರ್ಗ ವಾರ್ತೆ

ಲಕ್ನೊ : ಉತ್ತರ ಪ್ರದೇಶದಲ್ಲಿ ಬಂಧನಕ್ಕೊಳಗಾದ ಕೇರಳ ಮೂಲದ ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರ ಮೇಲೆ ಯುಎಪಿಎ ಕಾನೂನು ಹೊರಿಸಿ ಪ್ರಕರಣ ದಾಖಲಿಸಲಾಗಿದೆ. ಕೇರಳದ ಪಂದಳಂನ ಅನ್ಸಾದ್, ಕಲ್ಲಿಕೋಟೆಯ ಫಿರೋಝ್ ಬಂಧಿತರು.

ಕ್ರಿಮಿನಲ್ ಸಂಚು, ಆಯುಧಗಳು ಮತ್ತು ಸ್ಫೋಟಕ ವಸ್ತುಗಳನ್ನು ವಶದಲ್ಲಿರಿಸಿದ ಆರೋಪಗಳನ್ನು ಹೊರಿಸಿರುವ ಭಯೋತ್ಪಾದನೆ ವಿರೋಧಿ ಸ್ಕ್ವಾಡ್ ಎಫ್‍ಐಆರ್ ದಾಖಲಿಸಿಕೊಂಡಿದೆ. ಇತ್ತೀಚೆಗೆ ಇಬ್ಬರನ್ನು ಉತ್ತರ ಪ್ರದೇಶಪೊಲೀಸರು ಬಂಧಿಸಿದ್ದರು.

ನಗರದಲ್ಲಿ ಸ್ಫೋಟ ಮಾಡಲು ಯೋಜನೆ ರೂಪಿಸಿದ್ದರೆಂದು ಆರೋಪಿಸಿರುವ ಉತ್ತರ ಪ್ರದೇಶ ಪೊಲೀಸರು, ಯುಎಪಿಎ ಕಾನೂನು ಹೊರಿಸಿ ಪ್ರಕರಣ ದಾಖಲಿಸಿದ್ದಾರೆ. ಉತ್ತರ ಪ್ರದೇಶದ ಸ್ಪೆಶಲ್ ಟಾಸ್ಕ್ ಪೋರ್ಸ್ ಇಬ್ಬರನ್ನು ಬಂಧಿಸಿದೆ.

ಉತ್ತರ ಪ್ರದೇಶದ ಪ್ರಮುಖ ಕೇಂದ್ರಗಳಲ್ಲಿ ಸ್ಫೋಟ ನಡೆಸುವ ಯೋಜನೆ ರೂಪಿಸುತ್ತಿದ್ದರು. ಹಿಂದೂ ಸಂಘಟನೆ ನಾಯಕರನ್ನು ಗುರಿಯಾಗಿಟ್ಟುಕೊಂಡಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ. ಉತ್ತರಪ್ರದೇಶ ಪೊಲೀಸ್ ಅಡಿಶನಲ್ ಡೈರಕ್ಟರ್ ಜನರಲ್ ಪ್ರಶಾಂತ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಈ ವಿವರವನ್ನು ನೀಡಿದ್ದಾರೆ.